(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಡಿ12 ಮಲೆನಾಡಿನಲ್ಲೀಗ ಕೃಷಿ ಚಟುವಟಿಕೆಗಳು ಬಿರುಸಾಗಿ ನಡೆಯುವ ಕಾಲವಾಗಿದ್ದು, ಅಕಾಲಿಕ ಮಳೆ ರೈತರನ್ನು ಸಂಕಷ್ಟಕ್ಕೆ ಸಿಲುಕಿ ಹಾಕಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಮ್ಯಾಂಡೋಸ್ ಚಂಡಮಾರುತದಿಂದಾಗಿ ಧಾರಾಕಾರ ಮಳೆಯಾಗಿದ್ದು, ಇಡೀ ದಿನ ಮೋಡ ಮುಸುಕಿದ ವಾತಾವರಣವಿತ್ತು ಎನ್ನಲಾಗಿದೆ. ಕನಿಷ್ಠ ತಾಪಮಾನವು 19.9 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದ್ದು, 2 ಎಂಎಂ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವರ್ಷಪೂರ್ತಿ ಮಳೆಗಾಲ ಹಾಗೂ ಚಂಡಮಾರುತಗಳ ಕಾರಣದಿಂದಾಗಿ ನಿರಂತರ ಮಳೆ ಸುರಿಯುತ್ತಲೇ ಇದ್ದು, ಕೆರೆ, ನದಿ, ಜಲಾಶಯಗಳು ತುಂಬಿಕೊಂಡಿವೆ. ಅದರ ನಡುವೆ ಮತ್ತೊಮ್ಮೆ ವರ್ಷಧಾರೆಯಿಂದಾಗಿ ಮಲೆನಾಡಿನ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆಂದು ವರದಿ ತಿಳಿಸಿದೆ.