ಬಸ್ ಸೌಲಭ್ಯಕ್ಕೆ ಒತ್ತಾಯಿಸಿ-ಹುಬ್ಬಳ್ಳಿ-ವಿಜಯಪುರ ಗ್ರಾಮಸ್ಥರಿಂದ ಪ್ರತಿಭಟನೆ ➤ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು 

 (ನ್ಯೂಸ್ ಕಡಬ) newskadaba.com  ಧಾರವಾಡ, ಡಿ.12  ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಬಸ್ ನಿಲ್ದಾಣದ ಮುಂದೆ ನವಲಗುಂದ ತಾಲೂಕಿನ ಬಲ್ಲರವಾಡ, ಮೊರಬ,‌ಶಿರಕೋಳ ಹಾಗೂ ಮುಂತಾದ ಗ್ರಾಮೀಣ ಪ್ರದೇಶಗಳಿಗೆ ಬಸ್ ಸೌಕರ್ಯ ಸಿಗದಿರುವುದಕ್ಕೆ ಗ್ರಾಮಸ್ಥರು ಸೋಮವಾರದಂದು ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಿದರು ಎನ್ನಲಾಗಿದೆ.

ಮಾಜಿ ಶಾಸಕ ಹಾಗೂ ಮುಖ್ಯಮಂತ್ರಿಗಳ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಎಚ್.ಕೋನರಡ್ಡಿ ಅವರು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಸರಿಯಾಗಿ ಬಸ್ ಇಲ್ಲದೇ ಸಾಕಷ್ಟು ತೊಂದರೆ ಆಗಿದ್ದು ಪ್ರಯಾಣಿಕರು ಪರದಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

Also Read  ಒಂದು ಸಾಲಿನ ತೀರ್ಪು ಕೊಡುತ್ತಿದ್ದ ಕರ್ನಾಟಕದ ಜಡ್ಜ್‌ ವಜಾ

ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

 

 

error: Content is protected !!
Scroll to Top