ವೃಧ್ಧನಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ➤ವೃದ್ಧನನ್ನು ಹೊಡೆದು ಕೊಂದ ಕುಟುಂಬಸ್ಥರು

(ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ.12  16 ವರ್ಷದ ಅಪ್ರಾಪ್ತ ಬಾಲಕಿಗೆ ಜ್ಯೂಸ್‌ನಲ್ಲಿ ಆಲ್ಕೋಹಾಲ್‌ ಮಿಶ್ರಣ ಮಾಡಿ ಕುಡಿಸಿ ಅತ್ಯಾಚಾರ ಮಾಡಿದ್ದ, ವೃದ್ಧ ಕುಪ್ಪಣ್ಣ (73)ನನ್ನು ಬಾಲಕಿಯ ಸಂಬಂಧಿಕರು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹೆಣ್ಣೂರು ಬಳಿ ಸಂಭವಿಸಿದೆ.

ಹೆಣ್ಣೂರಿನ ಬಾಬುಬಸಾಬ್‌ ಪಾಳ್ಯದಲ್ಲಿ  ಹಲವು ವರ್ಷಗಳಿಂದ ವಾಸವಿದ್ದ ತಮಿಳುನಾಡು ಮೂಲದ ಕುಪ್ಪಣ್ಣ ತನಗೆ 4 ವರ್ಷದಿಂದ ಪರಿಚಯವಿದ್ದ ಬಾಲಕಿಯನ್ನು ಜ್ಯೂಸ್‌  ಕೊಡುವುದಾಗಿ ಮನೆಗೆ ಕರೆದಿದ್ದಾನೆ ಎನ್ನಲಾಗಿದೆ. ವೃದ್ಧನನ್ನು ನಂಬಿಕೊಂಡು ಜ್ಯೂಸ್‌ ಕುಡಿಯಲು ಹೋದ ಬಾಲಕಿಗೆ ಜ್ಯೂಸ್‌ನಲ್ಲಿ ಮಧ್ಯವನ್ನು ಮಿಶ್ರಣ ಮಾಡಿ ಕುಡಿಸಿದ್ದಾನೆ. ನಂತರ, ಬಾಲಕಿಗೆ ಮತ್ತೇರಿದ ನಂತರ ಬಲವಂತವಾಗಿ ಅತ್ಯಾಚಾರ  ಮಾಡಿದ್ದಾನೆ. ಘಟನೆ ವಿಚಾರವನ್ನು ಬಾಲಕಿ ಕಣ್ಣೀರು ಹಾಕುತ್ತ ಮನೆಯವರಿಗೆ ವಿವರವಾಗಿ ತಿಳಿಸಿದ್ದಾಳೆ. ಆಗ ಬಾಲಕಿ ಕುಟಂಬದ ಮೂವರು ಕುಪ್ಪಣ್ಣ ಮನೆಯಲ್ಲಿರುವುದನ್ನು ಗಮನಿಸಿ ಹೋಗಿ ಆತನ ಮೇಲೆ ಗಂಭೀರ ಹಲ್ಲೆ ಮಾಡಿ ಕೊಲೆ  ಮಾಡಿದ್ದಾರೆ ಎಂದು ತಿಳಿದುಬಂದಿದೆ.

Also Read  ತುಂಗಭದ್ರಾ ಅಣೆಕಟ್ಟು ದುರಸ್ತಿ ಕಾರ್ಯ ಸರ್ಕಾರದ ಮುಂದೆ ಯೋಜನೆ ರೂಪಿಸಿದ ತಜ್ಞರ ತಂಡ

 

error: Content is protected !!
Scroll to Top