ಆನೆಯ ದಂತ ಮಾರಟಕ್ಕೆ ಯತ್ನ !!! ➤ಐವರು ಆರೋಪಿಗಳ ಬಂಧನ

 (ನ್ಯೂಸ್ ಕಡಬ) newskadaba.com  ಚಾಮರಾಜನಗರ, ಡಿ.12 ಆನೆ ದಂತ ಮಾರಾಟ ಮಾಡಲು ಯತ್ನಿಸಿದ ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಬಸವಾಪುರ ಗ್ರಾಮದ ಸಮೀಪ ಬಳಿ ಸಂಭವಿಸಿದೆ.

ಆರೋಪಿಗಳನ್ನು ತಮಿಳುನಾಡು ಮೂಲದ ರಂಗಸ್ವಾಮಿ (35), ಸಂಜೀವ ಕುಮಾರ್ (41), ಎನ್.ವಿನೋದ್ (36), ಕದಿರೇಸನ್ (45), ಸೆಲ್ವನಾಯಗಂ (44) ಎಂದು ಗುರುತಿಸಲಾಗಿದೆ.

ಈ ಐವರು ಆನೆದಂತ ಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬಂಡೀಪುರ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಕಾರಿನಲ್ಲಿ ಅನುಮಾನಸ್ಪದವಾಗಿ ಬರುತ್ತಿದ್ದ ವೇಳೆ  ತಪಾಸಣೆಗೆ ಒಳಪಡಿಸಿದ ವೇಳೆ ಆನೆಯ ಎರಡು ದಂತ ಸಿಕ್ಕಿದೆ ಎನ್ನಲಾಗಿದೆ.

Also Read  ಗರ್ಭಪಾತದ ಮೊದಲು ಆಪ್ತ ಸಮಾಲೋಚನೆ ಕಡ್ಡಾಯ

ಕಾರಿನ ಸಮೇತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

 

 

error: Content is protected !!
Scroll to Top