(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ.12 ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನನ್ನು ಟ್ರಾಫಿಕ್ ಪೋಲೀಸರು ವಶಕ್ಕೆ ಪಡೆದುಕೊಂಡ ಘಟನೆ ಮೆಲ್ಕಾರ್ ನಲ್ಲಿ ನಡೆದಿದೆ.
ಪ್ರಕರಣದ ಆರೋಪಿಯನ್ನು ಮುಹಮ್ಮದ್ ಶೇಕ್ ಫೈಝಿಲ್ ಎಂದು ಗುರುತಿಸಲಾಗಿದೆ. ತಲಪಾಡಿ ಎಂಬಲ್ಲಿ ಬಿಸಿರೋಡಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಹಿಂಬದಿಯಿಂದ ಕಾರೊಂದು ಡಿಕ್ಕಿಯಾಗಿ ಪರಾರಿಯಾಗಿತ್ತು. ಡಿಕ್ಕಿಯಾದ ರಭಸಕ್ಕೆ ರಿಕ್ಷಾ ಪಲ್ಟಿಯಾಗಿ ರಿಕ್ಷಾ ಚಾಲಕ ಪುರುಷೋತ್ತಮ ಹಾಗೂ ಪ್ರಯಾಣಿಕ ಹೃತಿಕ ಎಂಬರಿಗೆ ಗಾಯವಾಗಿದ್ದು, ಗಾಯಗೊಂಡವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಳುಗಳು ನೀಡಿದ ಮಾಹಿತಿಯಂತೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾದ ಬಗ್ಗೆ ಮಾಹಿತಿ ಲಭ್ಯವಾಯಿತು. ಕೂಡಲೇ ಕಾರ್ಯಪ್ರವೃತ್ತರಾದ ಟ್ರಾಫಿಕ್ ಪೋಲೀಸರು ಸ್ಥಳೀಯ ಸಿ.ಸಿ.ಕ್ಯಾಮರಾ ಗಳನ್ನು ಪರಿಶೀಲನೆ ನಡೆಸಿದಾಗ ಕಾರಿನ ನಂಬರ್ ದೊರಕಿದ್ದು, ಸಿಸಿ ಕ್ಯಾಮರಾದ ಕಣ್ಗಾವಲಿನಿಂದ ತಪ್ಪಿಸುವ ಸಲುವಾಗಿ ಬಿಸಿರೋಡಿನ ಮೊಡಂಕಾಪು ಇತರ ಕಡೆಗಳಲ್ಲಿ ಸುತ್ತಾಡಿ ಬಳಿಕ ಶಾಂತಿ ಅಂಗಡಿ ಮನೆಗೆ ತೆರಳಿದ ಬಗ್ಗೆ ಮಾಹಿತಿ ತಿಳಿದುಬಂದಿದೆ. ಪ್ರಕರಣದ ತನಿಖಾಧಿಕಾರಿಯಾದ ರಾಜು ಹಾಗೂ ತನಿಖಾ ಸಹಾಯಕರಾದ ನಾಗೇಸ್ ಕೆ.ಸಿ. ಅವರು ಅರೋಪಿ ಹಾಗೂ ಕಾರನ್ನು ಪತ್ತೆಹಚ್ಚಿದ್ದಾರೆ ಎಂದು ವರದಿ ತಿಳಿಸಿದೆ.