ಡಿ.11 ರಂದು ಶ್ವಾನ ಪ್ರದರ್ಶನ

(ನ್ಯೂಸ್ ಕಡಬ) newskadaba.com ಮಂಗಳೂರು ಡಿ.10 ಕರಾವಳಿ ಕೆನೈನ್ ಕ್ಲಬ್ ಆಶ್ರಯದಲ್ಲಿ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಇದೇ 11ರಂದು ಬೆಳಿಗ್ಗೆ 9ಕ್ಕೆ ಶ್ವಾನಗಳ ರಾಷ್ಟ್ರಮಟ್ಟದ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ವರದಿಯಾಗಿದೆ.

 

ಶಾಸಕ ಡಿ. ವೇದವ್ಯಾಸ್ ಕಾಮತ್ ಕಾರ್ಯಕ್ರವನ್ನು ಉದ್ಘಾಟಿಸಿ, ಪಾಲಿಕೆ ಸಚೇತಕ ಪ್ರೇಮಾನಂದ ಶೆಟ್ಟಿ ಮತ್ತು ಶ್ವೇತಾ ಪರೇಕ್ ಭಾಗವಹಿಸುವರು. ಕೊರಿಯ ದೇಶದ ಚೂಂಗ್-ಗೀ ಎಎಚ್ಎನ್ ಮತ್ತು ವೊಂಗ್ ಜಾಂಗ್ ಲೀ ಅವರು ಶ್ವಾನ ಪ್ರದರ್ಶನದ ಮುಖ್ಯ ತೀರ್ಪುಗಾರರಾಗಿರುವರು ಎಂದು ತಿಳಿದುಬಂದಿದೆ.

Also Read  ಪ್ರಗತಿ ಪರಿಶೀಲನಾ ಸಭೆ ಮುಂದೂಡಿಕೆ

ವಿವಿಧ ತಳಿಗಳ ನಾಯಿಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.

 

error: Content is protected !!
Scroll to Top