ಧಾರಾಕಾರ ಮಳೆ ➤ನಾಲ್ವರು ಮೃತ್ಯು

(ನ್ಯೂಸ್ ಕಡಬ) newskadaba.com ಚೆನ್ನೈ, ಡಿ. 10. ಮಾಂಡೌಸ್ ಚಂಡಮಾರುತದ ಹೊಡೆತಕ್ಕೆ ಸಿಲುಕಿರುವ ತಮಿಳುನಾಡಿನಲ್ಲಿ ತೀವ್ರ ರೀತಿಯ ಹಾನಿಯಾಗಿದೆ. ಚೆನ್ನೈ ಮತ್ತು ಚೆಂಗಲಪಟ್ಟು ಜಿಲ್ಲೆಯ ಹಲವೆಡೆ ಜಲಾವೃತವಾಗಿದ್ದು, ಮರಗಳು ಧರೆಗುರುಳಿ ಬಿದ್ದಿವೆ ಎಂದು ವರದಿ ತಿಳಿಸಿದೆ. ರಸ್ತೆಗಳು ನೀರಿನಿಂದ ತುಂಬಿ ವಾಹನ ಸವಾರರು ಪರದಾಡುವಂತಾಗಿದೆ.

 

ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ಸಮೀಪದಲ್ಲಿದ್ದ ಪೆಟ್ರೋಲ್ ಬಂಕ್ ವೊಂದು ಹಾನಿಯಾಗಿದೆ ಎನ್ನಲಾಗಿದೆ. ಚೆನ್ನೈ ನಗರದಲ್ಲಿ ಹಲವು ಮರಗಳು ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ. ಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಅಲ್ಲೇ ಪಾರ್ಕಿಂಗ್ ಮಾಡಲಾಗಿದ್ದ ಮೂರು ಕಾರುಗಳಿಗೆ ತೀವ್ರ ರೀತಿಯ ಹಾನಿಯಾಗಿದೆ. ಧಾರಾಕಾರ ಮಳೆಯಿಂದಾಗಿ ನಾಲ್ವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.  151 ಮನೆಗಳು, ಗುಡಿಸಲು ಹಾನಿಯಾಗಿದೆಯೆಂದು ವರದಿ ತಿಳಿಸಿದೆ.

Also Read  17 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿ ಪತ್ತೆ.!

 

 

error: Content is protected !!
Scroll to Top