(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 10. ಆರ್ ಬಿಐ ರೆಪೋ ದರ 35 ಮೂಲಾಂಶದಷ್ಟು ಏರಿಸಿದ ಹಿನ್ನೆಲೆ ಹಲವು ಬ್ಯಾಂಕ್ ಗಳು ಗೃಹ ಸಾಲಗಳ ಬಡ್ಡಿದರಗಳನ್ನು ಏರಿಸಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಬಡ್ಡಿ ದರ ಏರಿಸಿದ್ದು, ಪಿಎನ್ ಬಿ ಗೃಹ ಸಾಲ ಬಡ್ಡಿ ದರಗಳನ್ನು 35 ಬಿಪಿ ಎಸ್ ನಷ್ಟು ಹೆಚ್ಚು ಮಾಡಿವೆ. ಆರ್ ಎಲ್ ಎಲ್ ಆರ್ ಅನ್ನು ಹಾಲಿ ಶೇ. 8.40 ರಿಂದ ಶೇ. 8.75ಕ್ಕೆ ಬದಲಾಯಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
ಡಿ.08ರಿಂದ ಇದು ಅನ್ವಯಿಸಲಿದ್ದು, ಮನೆ ಸಾಲ ಬಡ್ಡಿ ಶೇ.9 ಆಗಲಿದೆ. ಇದಕ್ಕೂ ಮುನ್ನ ಅದು ಶೇ. 8.65 ಆಗಿತ್ತು. ಬಡ್ಡಿ ಪರಿಷ್ಕರಣೆಯಿಂದಾಗಿ ವಾರ್ಷಿಕ ಬಡ್ಡಿ ದರ ಶೇ.8.55ರಿಂದ ಶೇ.10.80ವರೆಗೆ ಆಗಲಿದೆ ಎಂದು ಕೆನರಾ ಬ್ಯಾಂಕ್ ತಿಳಿಸಿದೆ. ಬ್ಯಾಂಕ್ ಆಫ್ ಬರೋಡಾ ಆಫ್ ಇಂಡಿಯಾ ಮತ್ತು ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಹಿತ ಹಲವು ಬ್ಯಾಂಕ್ ಗಳು ಈಗಾಗಲೇ ಬಡ್ಡಿದರ ಏರಿಸಿದೆ.