ಬೋಗಿ ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿದ್ದ ಯುವತಿ ಮೃತ್ಯು ➤ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

(ನ್ಯೂಸ್ ಕಡಬ) newskadaba.com ಆಂಧ್ರಪ್ರದೇಶ ಡಿ.09. ವಿಶಾಖಪಟ್ಟಣಂ ವ್ಯಾಪ್ತಿಯ ರೈಲು ನಿಲ್ದಾಣದಲ್ಲಿ ಬೋಗಿ ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿದ್ದ ಯುವತಿ ಎಂ.ಶಶಿಕಲಾ (22) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

 

ಎಂಸಿಎ ಓದುತ್ತಿದ್ದ ಆಕೆ ಬುಧವಾರ ಬೆಳಗ್ಗೆ ಅಣ್ಣಾವರಂನಿಂದ ಗುಂಟೂರು – ರಾಯಗಡ ರೈಲಿನಲ್ಲಿ ರೈಲು ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಅಪಘಾತಕ್ಕೆ ಗುರಿಯಾಗಿದ್ದು, ರೈಲ್ವೆ ರಕ್ಷಣಾ ತಂಡವು ಬೋಗಿ ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿದ್ದ ಯುವತಿಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಮಾಹಿತಿ ಪಡೆದ ಕುಟುಂಬ ಸದಸ್ಯರು ಆಸ್ಪತ್ರೆಗೆ ಧಾವಿಸಿದ್ದು, ಆದ್ರೆ ವಿಧಿ ಆಟವೇ ಬೇರೆಯಾಗಿತ್ತು.  ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Also Read  ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಅರೆಸ್ಟ್

 

error: Content is protected !!
Scroll to Top