(ನ್ಯೂಸ್ ಕಡಬ) newskadaba.com ಬಳ್ಳಾರಿ, ಡಿ. 09. ಲೈಂಗಿಕ ಕಿರುಕುಳ ಆರೋಪದ ಮೇಲೆ ಕೊಪ್ಪಳದ ಇಂಗ್ಲೀಷ್ ಪ್ರಾಧ್ಯಾಪಕರಾದ ಚಾಂದ್ ಭಾಷ ಇವರನ್ನು ಷರತ್ತುಬದ್ದವಾಗಿ ಅಮಾನತುಗೊಳಿಸುವ ಆದೇಶ ಶೀಘ್ರದಲ್ಲೇ ಬರಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಇಂಗ್ಲೀಷ್ ಭಾಷೆಯಲ್ಲಿ ಪಿಎಚ್ ಡಿ ಸಂಶೋಧನಾ ವಿದ್ಯಾರ್ಥಿನಿ ಈ ಕುರಿತು ,ಕಳೆದ ನ. 7 ,2022 ರಂದು ದೂರು ಸಲ್ಲಿಸಿದ್ದರು. ವಿಶ್ವವಿದ್ಯಾಲಯವು ಸಿಂಡಿಕೇಟ್ ಸದಸ್ಯೆ ಪದ್ಮಾ ವಿಠ್ಠಲ್, ಮಹಿಳಾ ಪ್ರಾಧ್ಯಾಪಕರಾದ ಪ್ರೊ . ಪವಿತ್ರ , ಗೌರಿ ಮಾಣಿಕ್ ಮಾನಸ ಮತ್ತು ಕಾನೂನು ಅಧಿಕಾರಿ ಜುಬೇರ ಅವರನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಿ, ವಿಚಾರಣೆ ನಡೆಸಿ ವರದಿ ಸಲ್ಲಿಸಲು ಆದೇಶ ನೀಡಿತ್ತು. ಆರೋಪಿತ ಚಾಂದ್ ಭಾಷ ಅವರು 2019ರಲ್ಲಿ ಇಂಗ್ಲೀಷ್ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದು, ಕೆಲ ವರ್ಷಗಳ ಕಾಲ ಬಳ್ಳಾರಿಯಲ್ಲಿನ ವಿಶ್ವ ವಿದ್ಯಾಲಯದ ಕ್ಯಾಂಪಸ್ ಸಲ್ಲಿ ಕರ್ತವ್ಯ ನಿರ್ವಹಿಸಿ, ಕೊಪ್ಪಳಕ್ಕೆ ವರ್ಗಾವಣೆಗೊಂಡಿದ್ದರು.