(ನ್ಯೂಸ್ ಕಡಬ) newskadaba.com ಮಲ್ಪೆ, ಡಿ.09 ಕೆಲಸಕ್ಕೆಂದು ಮಲ್ಪೆ ಬಂದರಿಗೆ ಬಂದಿದ್ದ ಕೇರದ ಮೂಲದ ವ್ಯಕ್ತಿಯೊಬ್ಬರು ಹಲವು ತಿಂಗಳುಗಳಿಂದ ನಾಪತ್ತೆಯಾಗಿರುವ ಕುರಿತು ವರದಿಯಾಗಿದೆ.
ನಾಪತ್ತೆಯಾದವರನ್ನು ಕೃಷ್ಣ(48) ಎಂದು ಗುರುತಿಸಲಾಗಿದೆ. ಈತನ ಪತ್ನಿ, ಮಕ್ಕಳು ಮಲ್ಪೆಗೆ ಹುಡುಕಿಕೊಂಡು ಬಂದಿದ್ದು, ಇವರ ಕುರಿತು ಮಾಹಿತಿ ದೊರಕಿದ್ದಲ್ಲಿ ಮಲ್ಪೆ ಪೊಲೀಸ್ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.