ಮತ್ತೆ ಕರ್ನಾಟಕದಿಂದ – ಮಹಾರಾಷ್ಟ್ರಕ್ಕೆ ಶುರುವಾದ ಬಸ್ ಸಂಚಾರ

(ನ್ಯೂಸ್ ಕಡಬ) newskadaba.com ಬೆಳಗಾವಿ, ಡಿ. 09. ಮಹಾರಾಷ್ಟ್ರ ಗಡಿ ಪರಿಸ್ಥಿತಿ ನಿಯಂತ್ರಣಕ್ಕೆ ಮತ್ತೆ ಕೆಎಸ್ಆರ್ ಟಿಸಿ ಬಸ್ಸು ಗಳ ಸಂಚಾರ ಆರಂಭವಾಗಿದೆ.

ಬೆಳಗಾವಿಯ ವಿವಿಧ ಭಾಗಗಳಿಂದ 400ಕ್ಕಿಂತಲೂ ಹೆಚ್ಚುಬಸ್ಸು ಗಳು ಶುಕ್ರವಾರದಂದು ತೆರಳಿದ್ದು, ಇದೇ ವೇಳೆ ಮಹಾರಾಷ್ಟ್ರದಿಂದಲೂ ಬೆಳಗಾವಿಗೆ ಹೆಚ್ಚುಬಸ್ಸು ಗಳು ಬಂದಿವೆ. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದುದರಿಂದ ಎರಡೂ ರಾಜ್ಯಗಳಿಗೂ  ಬಸ್ ಸಂಚಾರ ಸ್ಥಗಿತವಾಗಿತ್ತು. ಈಗ  ಕೊಲ್ಲಾಪುರ, ಪುಣೆ, ಮುಂಬೈ , ಮಿರತ್,ಸಾಂಗ್ಲಿ ಸೇರಿದಂತೆ ಹಲವು ನಗರಗಳಿಗೆ ಕರ್ನಾಟಕದಿಂದ ಬಸ್ಸುಗಳು ತೆರಳಿವೆ. ಚಿಕ್ಕೋಡಿಯಿಂದ ಪ್ರತಿದಿನ 200ಕ್ಕೂ ಹೆಚ್ಚುಬಸ್ಸು ಗಳು ಮಹಾರಾಷ್ಟ್ರಕ್ಕೆ ವಿವಿಧ ನಗರ,ಪಟ್ಟಣಗಳಿಗೆ ತೆರಳುತ್ತಿದ್ದವು. ಆದರೆ ಪೂರ್ಣ ಪ್ರಮಾಣದ ಸಂಚಾರಕ್ಕೆ ಸಾರಿಗೆ ನಿಗಮ ಹಿರಿಯ ಅಧಿಕಾರಿಗಳು ಇನ್ನೂ ಸಮ್ಮತಿಸಿಲ್ಲ, ಹೀಗಾಗಿ ಅರ್ಧದಷ್ಟು,ಬಸ್ಸು ಗಳು ಮಾತ್ರ ಸಂಚಾರಿಸುತ್ತಿವೆ.

Also Read  ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಪತ್ನಿಗೂ ಕೊರೋನಾ ವಾಸಿಟಿವ್.!

 

error: Content is protected !!
Scroll to Top