(ನ್ಯೂಸ್ ಕಡಬ) newskadaba.com ಹೊಸದಿಲ್ಲಿ ಡಿ.08 ಹೊಸವರ್ಷದ ಮೊದಲನೇಯ ದಿನದಿಂದ ಕಾರುಗಳ ಬೆಲೆ ಏರಿಕೆಯಾಗಲಿದೆಯೆಂದು ಮರ್ಸಿಡಿಸ್-ಬೆನ್ಜ್, ಆಡಿ, ರಿನಾಲ್ಟ್, ಕಿಯಾ ಇಂಡಿಯಾ ಮತ್ತು ಎಂಜಿ ಮೋಟರ್ ಕಂಪೆನಿಗಳು ಬುಧವಾರದಂದು ಘೋಷಿಸಿದೆ.
ತಯಾರಿಕ ವೆಚ್ಚ ಹೆಚ್ಚಳವಾಗಿರುವ ಪರಿಣಾಮವಾಗಿ ಬೆಲೆ ಏರಿಕೆ ಕ್ರಮಕ್ಕೆ ಮುಂದಾಗಿರುವುದಾಗಿ ಕಂಪೆನಿಗಳು ತಿಳಿಸಿದೆ.
ಕೆಲವು ದಿನಗಳ ಹಿಂದೆಯಷ್ಟೆ ಮಾರುತಿ ಸುಜುಕಿ ಹಾಗೂ ಟಾಟಾ ಮೋಟರ್ ಕಂಪೆನಿಗಳು ಜನವರಿಯಿಂದ ಕಾರುಗಳ ಬೆಲೆ ಏರಿಕೆಯಾಗಲಿದೆ ಎಂದು ತಿಳಿಸಿತ್ತು. ಆಡಿ ಕಾರುಗಳ ಬೆಲೆಯಲ್ಲಿ ಶೇ.1.7ರಷ್ಟು, ಮರ್ಸಿಡಿಸ್ ಬೆನ್ಜ್ ಕಾರುಗಳ ಬೆಲೆಯಲ್ಲಿ ಶೇ.5ರಷ್ಟು ,ಎಂಜಿ ಕಾರುಗಳ ಬೆಲೆಯಲ್ಲಿ ಶೇ.2-3ರಷ್ಟು, ಕಿಯಾ ಕಾರುಗಳ ಬೆಲೆ 50,000 ರೂ.ಗಳವರೆಗೆ ಏರಿಯಾಗಲಿದೆ ಎಂದು ಪ್ರಕಟನೆ ತಿಳಿಸಿದೆ.
ಹೊಸವರ್ಷದಿಂದ ಕಾರುಗಳ ಬೆಲೆಗಳಲ್ಲಿ ಏರಿಕೆ…!!!
