(ನ್ಯೂಸ್ ಕಡಬ) newskadaba.com ಮಂಡ್ಯ, ಡಿ. 08. ಅಂತರಾಜ್ಯ ಬೈಕ್ ಕಳ್ಳನೋರ್ವನನ್ನು ಮದ್ದೂರು ಠಾಣಾ ಪೊಲೀಸರು ಬಂಧಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಆ ಬಂಧಿತ ಆರೋಪಿಯನ್ನು ರಾಜೇಶ್ ಎಂದು ಗುರುತಿಸಲಾಗಿದೆ. ಈತ ಜೂಜು ಹಾಗೂ ಹುಡುಗಿಯರ ಶೋಕಿಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ಈ ಕುರಿತು ತಪಾಸಣೆ ನಡೆಸಿದಾಗ ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ತೆರಳುತ್ತಿದ್ದ ಈತನನ್ನು ಪೊಲೀಸರು ತಡೆದು ವಿವರ ಕೇಳಿದಾಗ ಯಾವುದೇ ಡಾಕ್ಯುಮಂಟ್ ತೋರಿಸದೆ ಅನುಮಾನಸ್ಪದವಾಗಿ ವರ್ತಿಸಿದ್ದಾನೆ. ನಂತರ ಈತ ಕಳ್ಳತನ ನಡೆಸಿರುವುದು ಒಪ್ಪಿಕೊಂಡಿದ್ದಾನೆ. ಈತನಿಂದ ಬೈಕ್ ಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.
ಅಂತರಾಜ್ಯ ಬೈಕ್ ಕಳ್ಳನ ಬಂಧನ
