ಸೈನಿಕ ಕಲ್ಯಾಣಕ್ಕೆ ಸರಕಾರ ಬದ್ದ ➤ ಥಾವರ್ ಚಂದ್ ಗೆಹ್ಲೋಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 08. ಸಶಸ್ತ್ರ ಪಡೆಗಳ ಸಿಬ್ಬಂದಿ ಅನೇಕ ಕ್ಷೇತ್ರಗಳಲ್ಲಿ ಅಪಾರ ಅನುಭವವನ್ನು ಹೊಂದಿರುವುದಲ್ಲದೇ, ನಿವೃತ್ತಿಯಾದ ನಂತರ ಅವರ ಅನುಭವಗಳು ಸ್ವಾವಲಂಬಿ ಭಾರತಕ್ಕೆ ಸಹಾಯವಾಗುತ್ತದೆ ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ರಾಜಭವನದ ಗಾಜಿನಮನೆಯಲ್ಲಿ ನಡೆದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಲ್ಲದೇ ದೇಶದ ಸಾರ್ವಭೌಮತೆ ಹಾಗೂ ಸಮಗ್ರತೆಯನ್ನು ಕಾಪಾಡಲು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ವೀರ ಯೋಧರಿಗೆ ಗೌರವಪೂರ್ವಕವಾಗಿ ನಾನು ವಂದಿಸುತ್ತೇನೆ ಎಂದರು.

Also Read  ಸೈಕ್ಲೋನ್ ಎಫೆಕ್ಟ್ ಗಗನಕ್ಕೇರಿದೆ ತರಕಾರಿ ಬೆಲೆ!

 

error: Content is protected !!
Scroll to Top