ನಾಪತ್ತೆಯಾಗಿದ್ದ ಬಾಲಕನ ಮೃತದೇಹ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಡಿ.07. ನಾಪತ್ತೆಯಾಗಿದ್ದ  ಬಾಲಕನ ಮೃತದೇಹ ವಿರೂಪಗೊಂಡ ಸ್ಥಿತಿಯಲ್ಲಿ  ಪತ್ತೆಯಾದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ  ನಡೆದಿದೆ.

 

16 ವರ್ಷದ ಬಾಲಕನನ್ನು  ಆತನ ನಿವಾಸದಿಂದ ಅಪಹರಿಸಿದ ನಂತರ ಹತ್ಯೆ ಮಾಡಲಾಗಿದ್ದು, ಈ ಕೃತ್ಯವನ್ನು ನರಬಲಿಗಾಗಿ ಬಾಲಕನ ನೆರೆಮನೆಯಾತ ಮಾಡಿದ್ದಾನೆಂದು ಶಂಕಿಸಲಾಗಿದೆ.  ಈ ಕುರಿತು ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ, ಆರೋಪಿಯು ಬಾಲಕನನ್ನು ಕೊಲೆ ಮಾಡಿ ಮೀರತ್ನ ಕಬ್ಬಿನ ಗದ್ದೆಯಲ್ಲಿ ಬಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರ ತಂಡವು ತಲೆ ಮತ್ತು ಕೈಕಾಲು ಇಲ್ಲದ ಮೃತದೇಹವನ್ನು ಪತ್ತೆ ಹಚ್ಚಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Also Read  ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಂಗಳೂರು ➤ ಫೀಲ್ಡ್ ಸರ್ವಿಸ್ ಇಂಜಿನಿಯರ್ ಹುದ್ದೆಗೆ ನೇರ ನೇಮಕಾತಿ

 

 

 

 

error: Content is protected !!
Scroll to Top