ನಟ ಮಹೇಶ್​ ಬಾಬು ಅವರ ತಂದೆ ‘ಸೂಪರ್​ ಸ್ಟಾರ್​ ಕೃಷ್ಣ’ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ನ.15: ತೆಲುಗು ಚಿತ್ರರಂಗದ ಖ್ಯಾತ ನಟ ಮಹೇಶ್​ ಬಾಬು ಅವರ ತಂದೆ ‘ಸೂಪರ್​ ಸ್ಟಾರ್​’ ಕೃಷ್ಣ ಅವರು ಮಂಗಳವಾರ (ನ.15) ನಸುಕಿನ 4 ಗಂಟೆ ಸುಮಾರಿಗೆ ನಿಧನರಾದರು. ಅವರ ಅಗಲಿಕೆಗೆ ಅಭಿಮಾನಿಗಳು, ಆಪ್ತರು ಕಂಬನಿ ಮಿಡಿಯುತ್ತಿದ್ದಾರೆ. ಮಹೇಶ್​ ಬಾಬು ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಕೃಷ್ಣ ಅವರ ಜೊತೆ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಹೇಶ್​ ಬಾಬು ಅವರು ಬಾಲನಟನಾಗಿ ಅಭಿನಯಿಸಿದ್ದರು. ತಂದೆಯ ನಿಧನದಿಂದ ಅವರೀಗ ಕಣ್ಣೀರು ಹಾಕುತ್ತಿದ್ದಾರೆ. ಸೆಪ್ಟೆಂಬರ್​ 28ರಂದು ಮಹೇಶ್​ ಬಾಬು ಅವರ ತಾಯಿ ಇಂದಿರಾ ದೇವಿ ನಿಧನರಾದರು. ಅದಾಗಿ ಒಂದೂವರೆ ತಿಂಗಳು ಕಳೆಯುವುದರೊಳಗೆ ‘ಪ್ರಿನ್ಸ್​’ ತಂದೆ ಕೃಷ್ಣ ಕೂಡ ಇಹಲೋಕ ತ್ಯಜಿಸಿದ್ದು ತೀವ್ರ ನೋವಿನ ಸಂಗತಿ.

Also Read  ರಥಸಪ್ತಮಿಯ ದಿನ ಈ ಒಂದು ವಸ್ತುವನ್ನು ಧಾನವಾಗಿ ನೀಡಿದರೆ ಎಲ್ಲ ರೀತಿಯ ಸಂಕಷ್ಟಗಳು ನಿವಾರಣೆಯಾಗುತ್ತವೆ

ತಾಯಿ ಇಂದಿರಾ ದೇವಿ ಅವರ ನಿಧನದ ನೋವು ಮಾಸುವ ಮುನ್ನವೇ ತಂದೆ ಕೂಡ ಕೊನೆಯುಸಿರು ಎಳೆದಿರುವುದು ಮಹೇಶ್​ ಬಾಬು ಪಾಲಿನ ದುಃಖವನ್ನು ದುಪ್ಪಟ್ಟುಗೊಳಿಸಿದೆ. ಒಂದಷ್ಟು ದಿನಗಳ ಕಾಲ ಅವರು ಸಿನಿಮಾ ಕೆಲಸಗಳಿಗೆ ಬ್ರೇಕ್​ ನೀಡಲಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಕೃಷ್ಣ ಅವರು ಸೂಪರ್​ ಸ್ಟಾರ್​ ಆಗಿದ್ದರು. 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅವರು ಜನಪ್ರಿಯತೆ ಪಡೆದಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಪ್ರಾರ್ಥಿಸುತ್ತಿದ್ದಾರೆ.

error: Content is protected !!
Scroll to Top