ಭಾರೀ ಮೊತ್ತಕ್ಕೆ ಮಾರಾಟವಾಯಿತು ‘ಮಾಂಕ್ ದಿ ಯಂಗ್’ ಚಿತ್ರದ ಹಾಡುಗಳು

(ನ್ಯೂಸ್ ಕಡಬ) newskadaba.com ನ.07:ಹೊಸ ತಂಡ ಸೇರಿ ನಿರ್ಮಿಸಿರುವ “ಮಾಂಕ್ ದಿ ಯಂಗ್” ಚಿತ್ರದ ಹಾಡುಗಳು ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಪ್ರತಿಷ್ಠಿತ ಆನಂದ್ ಆಡಿಯೋ ಸಂಸ್ಥೆ ಈ ಚಿತ್ರದ ಆಡಿಯೋ ಹಕ್ಕನ್ನು ಖರೀದಿಸಿದೆ. ಸುಪ್ರೀತ್ ಫಾಲ್ಗುಣ ಸಂಗೀತ ನೀಡಿರುವ ಈ ಚಿತ್ರದಲ್ಲಿ ಎರಡು ಸುಮಧುರ ಹಾಡುಗಳಿದೆ.

ಅಶ್ವಿನ್ ಶಾನ್ ಭಾಗ್ ಬರೆದಿರುವ ಈ ಹಾಡುಗಳನ್ನು ಖ್ಯಾತ ಗಾಯಕರಾದ ಸಾದ್ವಿನಿ ಕೊಪ್ಪ ಹಾಗೂ ಐಶ್ವರ್ಯ ರಂಗರಾಜನ್ ಹಾಡಿದ್ದಾರೆ. ನವೆಂಬರ್ 28 ರಂದು ಅದ್ದೂರಿಯಾಗಿ ಆಡಿಯೋ ರಿಲೀಸ್ ಮಾಡುವ ಸಿದ್ದತೆ ನಡೆಯುತ್ತಿದೆ.
ಇತ್ತೀಚಿಗೆ ಖ್ಯಾತ ನಿರ್ದೇಶಕ – ನಟ ರಿಷಭ್ ಶೆಟ್ಟಿ ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದರು. ವಿಂಟೇಜ್, ಫ್ಯಾಂಟಸಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಮಾಸ್ಚಿತ್ ಸೂರ್ಯ ನಿರ್ದೇಶಿಸಿದ್ದಾರೆ. ಸರೋವರ್ ಅವರು ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಸೌಂದರ್ಯ ಗೌಡ. ನಿವೃತ್ತ ಆರ್ಮಿ ಆಫೀಸರ್ ರಾಜೇಂದ್ರನ್, ವಿನಯ್ ಬಾಬು ರೆಡ್ಡಿ ಶೆಟ್ಟಿಹಳ್ಳಿ, ಸರೋವರ್, ಗೋಪಿಚಂದ್, ಲಾಲ್ ಚಂದ್ ಖತಾರ್ ಐದು ಜನ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಾರ್ತಿಕ್ ಶರ್ಮ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹದ ನಿರ್ದೇಶನ ಹಾಗೂ ವಿಜೇತ್ ಚಂದ್ರ ಅವರ ಸಂಕಲನ ಈ ಚಿತ್ರಕ್ಕಿದೆ.

Also Read  ನೂಜಿಬಾಳ್ತಿಲ: ಯುವಸಾಹಿತಿ ಸಮ್ಯಕ್ತ್ ಜೈನ್ ಹಾಗೂ ದಿನೇಶ್ ರೈ ಅವರಿಗೆ ಕನ್ವರೆ ಸಾರಿಮಂಟಮೆಯಲ್ಲಿ ಸನ್ಮಾನ

error: Content is protected !!
Scroll to Top