ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಆಲಿಯಾ ಭಟ್

(ನ್ಯೂಸ್ ಕಡಬ) newskadaba.com ನ.07:ಬಾಲಿವುಡ್ ನಟಿ ಆಲಿಯಾ ಭಟ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅವರಿಗೆ ನಿನ್ನೆ ಬೆಳಗ್ಗೆ ಹೆರಿಗೆ ಬೇನೆ ಕಾಣಿಸಿಕೊಂಡ ಕಾರಣ ಪತಿ ರಣಬೀರ್ ಕಪೂರ್ ಆಸ್ಪತ್ರೆಗೆ ದಾಖಲಿಸಿದ್ದರು. ಆಲಿಯಾ ಭಟ್ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ.

ಆಲಿಯಾ ಭಟ್ ಅವರನ್ನು ಹೆರಿಗೆಗೆ ಮುಂಬೈನ ಎಚ್‌ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಬಾಲಿವುಡ್ ಮೋಸ್ಟ್‌ ಕ್ಯೂಟ್, ರೊಮ್ಯಾಂಟಿಕ್ ಆಂಡ್ ಹಾಟ್ ಕಪಲ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಹೆಣ್ಣು ಮಗುವನ್ನು ಬರ ಮಾಡಿಕೊಂಡಿದ್ದು. ಆಲಿಯಾ ಭಟ್ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಕಪೂರ್ ಮತ್ತು ಭಟ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದು ಬರುತ್ತಿದೆ.

Also Read  ನೆರೆಯಿಂದ ಮನೆ ಹಾನಿಯಾದ ಸಿಬ್ಬಂದಿಗೆ ಸಹಾಯ ಹಸ್ತ

ಆಲಿಯಾ ಭಟ್​ ಹಾಗೂ ರಣಬೀರ ಕಪೂರ ಎಪ್ರಿಲ್​ 14 2022ರಂದು ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ 2 ತಿಂಗಳಲ್ಲಿಯೇ ಗರ್ಭಿಣಿಯಾದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.ಇದೀಗ ಮದುವೆಯಾಗಿ 7 ತಿಂಗಳು ಪೂರ್ಣಗೊಳ್ಳುವ ಮೊದಲೇ ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ .

error: Content is protected !!
Scroll to Top