ಚಂದ್ರಗ್ರಹಣ ಹಿನ್ನೆಲೆ ➤‌ ನ.8ರಂದು ಈ ದೇವಾಲಯಗಳು ಬಂದ್

(ನ್ಯೂಸ್ ಕಡಬ) newskadaba.com ಬೆಂಗಳೂರು ನ.07:ಚಂದ್ರಗ್ರಹಣ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ದರ್ಶನ ಮಾತ್ರವಿರುತ್ತದೆ. ಆದರೆ, ಪೂಜೆ- ಪುನಸ್ಕಾರ, ಅನ್ನ ಸಂತರ್ಪಣೆ ವ್ಯವಸ್ಥೆಯಿರುವುದಿಲ್ಲ. ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಚಂದ್ರಗ್ರಹಣದ ಹಿನ್ನೆಲೆ ದೇವರ ದರ್ಶನದ ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ. ನವೆಂಬರ್ 8, ಮಂಗಳವಾರ ಬೆಳಗ್ಗೆ 6ರಿಂದ 9 ಗಂಟೆಯವರೆಗೆ ದೇವರ ಸ್ಪರ್ಶ ದರ್ಶನಕ್ಕೆ ಅವಕಾಶವಿರುತ್ತದೆ. ಮಧ್ಯಾಹ್ನ 2.30ರಿಂದ ಸಂಜೆ 6.30 ರವರೆಗೆ ಅಂದರೆ ಗ್ರಹಣ ಕಾಲದಲ್ಲೂ ಭಕ್ತರಿಗೆ ದೇವರ ಸ್ಪರ್ಶ ದರ್ಶನಕ್ಕೆ ಅವಕಾಶವಿರುತ್ತದೆ.


ಆದರೆ, ಈ ದಿನ ಮಧ್ಯಾಹ್ನ ಮತ್ತು ಸಂಜೆ ಭಕ್ತರಿಗೆ ನೀಡುವ ಪ್ರಸಾದ ಭೋಜನ ವ್ಯವಸ್ಥೆಯಿರುವುದಿಲ್ಲ. ಮುರುಡೇಶ್ವರ ದೇವಸ್ಥಾನ, ಇಡಗುಂಜಿ ಮಹಾಗಣಪತಿ ದೇವಸ್ಥಾನ, ಶಿರಸಿ ಮಾರಿಕಾಂಬಾ ದೇವಸ್ಥಾನ, ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನ. ದ‌.ಕ ಜಿಲ್ಲೆಯ ಕಡಬ ತಾಲೂಕಿನ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಚಂದ್ರ ಗ್ರಹಣ ಹಿನ್ನೆಲೆ ಸೇವೆಗಳ ಜೊತೆಗೆ ಅನ್ನದಾನವೂ ನ.8ರಂದು ಸ್ಥಗಿತವಾಗಲಿದೆ. ಅರ್ಚಕರ ನಿರ್ದೇಶನದಂತೆ ದೇವರ ದರ್ಶನದ ಸಮಯದಲ್ಲೂ ವ್ಯತ್ಯಯವಾಗಲಿದ್ದು, ಬೆಳಗ್ಗೆ 9 ಗಂಟೆಯಿಂದ 11.30ರ ತನಕ ದರ್ಶನಕ್ಕೆ ಅವಕಾಶ ಇರಲಿದೆ. ರಾತ್ರಿ 7.30ರಿಂದ 9ರ ತನಕ ಶ್ರೀ ದೇವರ ದರ್ಶನಕ್ಕೆ ಅವಕಾಶ ಇರುವುದು.

error: Content is protected !!

Join the Group

Join WhatsApp Group