ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕಿ ಪಲಕ್ ಮುಚ್ಚಲ್

(ನ್ಯೂಸ್ ಕಡಬ) newskadaba.com ನ.07: ಗಾಯಕಿ ಪಲಕ್ ಮುಚ್ಚಲ್ ಬಹುಕಾಲದ ಗೆಳೆಯನ ಜೊತೆ ಹಸೆಮಣೆ ಏರಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಗಾಯಕಿ ಪಲಕ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸದ್ಯ ಈ ಜೋಡಿಯ ಮದುವೆ ಮತ್ತು ರಿಸೆಪ್ಷನ್‌ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಕನ್ನಡ, ತಮಿಳು, ತೆಲಗು, ಹಿಂದಿ ಸೇರಿದಂತೆ ಸಾಕಷ್ಟು ಭಾಷೆಯ ಹಾಡುಗಳು ಪಲಕ್ ಕಂಠದಲ್ಲಿ ಮೂಡಿ ಬಂದಿದೆ. ತಮ್ಮ ಸುಮಧುರ ಕಂಠದ ಮೂಲಕ ಮನೆ ಮಾತಾಗಿರುವ ಪಲಕ್ ಇದೀಗ ಮಿಥುನ್ ಶರ್ಮಾ ಜೊತೆ ಹಸೆಮಣೆ ಏರಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ (ನ.6)ರಂದು ಈ ಜೋಡಿ ದಾಂಪತ್ಯ ಕಾಲಿಟ್ಟಿದ್ದಾರೆ. ಮಿಥುನ್ ಶರ್ಮಾ ಕೂಡ ಬಾಲಿವುಡ್‌ನಲ್ಲಿ ತಮ್ಮ ಸಂಗೀತ ನಿರ್ದೇಶನದ ಮೂಲಕ ಗುರುತಿಸಿಕೊಂಡಿದ್ದಾರೆ. ಇನ್ನೂ ಈ ಜೋಡಿಯ ಮದುವೆಗೆ ಅನೇಕ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ. ಇನ್ನೂ ಅನೇಕ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿರುವ ಪಲಕ್, ಬಂದ ಹಣದಲ್ಲಿ ಮಕ್ಕಳ ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. 2200ಕ್ಕೂ ಹೆಚ್ಚು ಮಕ್ಕಳಿಗೆ ಜೀವ ಉಳಿಸಿದ್ದಾರೆ.

Also Read  ಗಾಯಕಿ ಎಸ್‌. ಜಾನಕಿ ಆರೋಗ್ಯವಾಗಿದ್ದಾರೆ ➤ ಎಸ್ ಪಿ ಬಿ ಸ್ಪಷ್ಟನೆ 

error: Content is protected !!
Scroll to Top