ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ಕಾಪಾಡಲು ಇಲ್ಲಿದೆ ಕೆಲವೊಂದು ಟಿಪ್ಸ್ ಗಳು

(ನ್ಯೂಸ್ ಕಡಬ) newskadaba.com ನ.02:ಈ ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ ಇರುವುದರಿಂದ ನೀರು ಕುಡಿಯುವುದನ್ನೇ ಮರೆತು ಬಿಡುವುದುಂಟು. ಇದರಿಂದಾಗಿ ನಿಮ್ಮ ದೇಹದಲ್ಲಿ ತೇವಾಂಶವು ಕಡಿಮೆಯಾಗುತ್ತಾ ಹೋಗುತ್ತದೆ. ನಿಮ್ಮ ಚರ್ಮದ ತೇವಾಂಶವನ್ನು ಮರಳಿ ಪಡೆಯಲು ಉತ್ತಮ ಮಾರ್ಗವೆಂದರೆ ಸಾಕಷ್ಟು ನೀರು ಕುಡಿಯುವುದು ಅಗತ್ಯ. ದಿನಕ್ಕೆ ಕನಿಷ್ಠ 2 ಲೀಟರ್ ನೀರನ್ನು ಕುಡಿಯಿರಿ. ನೀರಿನ ಬದಲಾಗಿ ನಿಂಬೆ ರಸ ಅಥವಾ ಹಣ್ಣಿನ ರಸಗಳ ಜ್ಯೂಸ್ ದೇಹಕ್ಕೆ ತೇವಾಂಶ ಹೆಚ್ಚಿಸುತ್ತದೆ.


ಹೆಚ್ಚಿನ ವಿಟಮಿನ್ ಸಿ ಹೊಂದಿರುವ ಆಹಾರಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು ಹೆಚ್ಚಾಗಿರುವುದರಿಂದ ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ಇದರಿಂದ ನಿಮ್ಮ ಚರ್ಮವು ಆರೋಗ್ಯವಾಗಿರಲು ಸಹಾಯಮಾಡುತ್ತದೆ. ಆದ್ದರಿಂದ ಆದಷ್ಟು ಕಿತ್ತಳೆ ಹಣ್ಣು ಅಥವಾ ಕಿತ್ತಳೆ ಹಣ್ಣಿನ ಜ್ಯೂಸ್ ಮಾಡಿ ಸೇವಿಸುವುದು ಉತ್ತಮ. ಪಾಲಕ್, ಎಲೆಕೋಸು, ಸಾಸಿವೆ, ಮೆಂತ್ಯ ಎಲೆಗಳು ನಿಮ್ಮ ಚರ್ಮವನ್ನು ಪೋಷಿಸುವ ವಿಟಮಿನ್ ಕೆ ಯನ್ನು ಹೊಂದಿದ್ದು, ಇದು ಚಳಿಗಾಲ ಮಾತ್ರವಲ್ಲದೆ, ಎಲ್ಲಾ ಸಮಯದಲ್ಲೂ ಚರ್ಮವನ್ನು ಆರೋಗ್ಯವಾಗಿಡಲು ಸಹಾಯಮಾಡುತ್ತದೆ.

Also Read  ➤➤ ವಿಶೇಷ ಲೇಖನ ಉಗ್ಗುವಿಕೆ ✍️ ಡಾ. ಮುರಲೀ ಮೋಹನ ಚೂಂತಾರು

ಡ್ರೈ ಫ್ರೂಟ್ಸ್ ಸಾಕಷ್ಟು ಪೌಷ್ಟಿಕಾಂಶಗಳನ್ನು ಒಳಗೊಂಡಿದ್ದು, ಇದು ಚರ್ಮಕ್ಕೆ ಹೊಳಪನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ, ಈ ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ರಕ್ಷಿಸಲು ಪ್ರತಿ ಡ್ರೈ ಫ್ರೂಟ್ಸ್ ಪ್ರತಿದಿನ ತಿನ್ನುವುದನ್ನು ರೂಡಿಸಿಕೊಳ್ಳಿ.

error: Content is protected !!
Scroll to Top