ಬೆಳ್ಳಿ ದರದಲ್ಲಿ ₹2,000 ಜಿಗಿತ ➤‌ ಚಿನ್ನದ ದರ ಇಳಿಕೆ

(ನ್ಯೂಸ್ ಕಡಬ) newskadaba.com ನ.02: ರೂಪಾಯಿ ಮೌಲ್ಯದಲ್ಲಿ ಚೇತರಿಕೆ, ಷೇರುಪೇಟೆಯ ಗಳಿಕೆಯ ಓಟ ಮುಂದುವರಿದಿರುವ ಮಧ್ಯೆ ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ದರ ತುಸು ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ದರದಲ್ಲಿ 2000 ರೂ. ಜಿಗಿತವಾಗಿದೆ. ಹಿಂದಿನ ದಿನ ಚಿನ್ನ ಹಾಗೂ ಬೆಳ್ಳಿ ದರ ತುಸು ಏರಿಳಿತಗಳ ಮೂಲಕ ಸ್ಥಿರತೆ ಕಾಯ್ದುಕೊಂಡಿದ್ದವು.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 50 ರೂ. ಇಳಿಕೆಯಾಗಿ 46,550 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 60 ರೂ. ಇಳಿಕೆಯಾಗಿ 50,780 ರೂ. ಆಗಿದೆ. ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ: ಬೆಂಗಳೂರು- 59,500 ರೂ, ಮೈಸೂರು- 65,000 ರೂ., ಮಂಗಳೂರು- 65,000 ರೂ., ಮುಂಬೈ- 59,500 ರೂ, ಚೆನ್ನೈ- 65,000 ರೂ, ದೆಹಲಿ- 59,500 ರೂ, ಹೈದರಾಬಾದ್- 65,000 ರೂ, ಕೊಲ್ಕತ್ತಾ- 65,000 ರೂ. ಆಗಿದೆ.

error: Content is protected !!

Join the Group

Join WhatsApp Group