ವಿಶ್ವದ ಅತಿದೊಡ್ಡ ಐಫೋನ್ ಕಾರ್ಖಾನೆಯಲ್ಲಿ ಕೋವಿಡ್ ಲಾಕ್‌ಡೌನ್‌ !

(ನ್ಯೂಸ್ ಕಡಬ) newskadaba.com ನ.02: ಝೆಂಗ್‌ಝೌನಲ್ಲಿರುವ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್‌ನ ಮುಖ್ಯ ಸ್ಥಾವರದ ಸುತ್ತಲಿನ ಪ್ರದೇಶವನ್ನು ಏಳು ದಿನಗಳ ಲಾಕ್‌ಡೌನ್‌ಗೆ ಚೀನಾ ಆದೇಶಿಸಿದೆ, ಇದು ವಿಶ್ವದ ಅತಿದೊಡ್ಡ ಐಫೋನ್ ಕಾರ್ಖಾನೆಯಾಗಿದ್ದು, ಇದೀಗ ಇಲ್ಲಿ ಆಮದು ಮತ್ತು ರಪ್ತು ಮಾಡುವ ಎಲ್ಲ ಕಾರ್ಯಗಳನ್ನು ಮೊಟಕುಗೊಳಿಸಿದೆ ಎಂದು ಸರ್ಕಾರ ಹೇಳಿದೆ. ಲಾಕ್‌ಡೌನ್ ನವೆಂಬರ್ 9ರವರೆಗೆ ಇರುತ್ತದೆ ಎಂದು ಸ್ಥಳೀಯ ಸರ್ಕಾರವು ತನ್ನ WeChat ಖಾತೆಗೆ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳನ್ನು ಹೊರತುಪಡಿಸಿ ಯಾವುದೇ ವಾಹನಗಳು ಕಾರ್ಯನಿರ್ವಹಿಸಲು ಅನುಮತಿಸುವುದಿಲ್ಲ ಎಂದು ಸರ್ಕಾರ ಹೇಳಿದೆ. ಕೋವಿಡ್ -19 ಪ್ರಕರಣಗಳು ಮಂಗಳವಾರ 359 ಕ್ಕೆ ಏರಿದೆ ಎಂದು ಜೆಂಗ್‌ಝೌ ವರದಿ ಮಾಡಿದ ನಂತರ ಈ ಸೂಚನೆ ನೀಡಲಾಗಿದೆ. ಒಂದೇ ದಿನ 95ರಷ್ಟು ಕೋವಿಡ್ -19 ಪ್ರಕರಣ ಹೆಚ್ಚಾಗಿದೆ. ಕೋವಿಡ್ ಹೆಚ್ಚಾದ ಕಾರಣ ತಕ್ಷಣಕ್ಕೆ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ. ಬೀಜಿಂಗ್‌ನ ಕೋವಿಡ್ ಶೂನ್ಯ ಮಟ್ಟಕ್ಕೆ ತರಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.

error: Content is protected !!
Scroll to Top