ಪರಭಾಷೆಯಲ್ಲಿ 100 ಕೋಟಿ ರೂಪಾಯಿ ಬಾಚಿದ ‘ಕಾಂತಾರ’

(ನ್ಯೂಸ್ ಕಡಬ) newskadaba.com ಅ.28: ‘ಕಾಂತಾರ’ ಸಿನಿಮಾ ನಿತ್ಯ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಕಡಿಮೆ ಬಜೆಟ್​ನಲ್ಲಿ ಸಿದ್ಧವಾದ ಈ ಚಿತ್ರ ನೂರಾರು ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಚಿತ್ರದಿಂದ ಹೊಂಬಾಳೆ ಫಿಲ್ಮ್ಸ್​ಗೆ ಒಳ್ಳೆಯ ಲಾಭ ಆಗಿದೆ. ಈ ಚಿತ್ರದಿಂದ ರಿಷಬ್ ಶೆಟ್ಟಿ ಅವರು ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದರು. ‘ಕಾಂತಾರ’ ರಿಲೀಸ್ ಆಗಿ ಒಂದು ತಿಂಗಳಾಗಿದೆ. ಆದಾಗ್ಯೂ ಈ ಚಿತ್ರದ ಅಬ್ಬರ ಕಡಿಮೆ ಆಗುತ್ತಿಲ್ಲ. ಸಿನಿಮಾ ನೋಡಿದ ಬಹುತೇಕರು ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಡಬ್ ಆಗಿ ತೆರೆಕಂಡ ಮೂರು ಭಾಷೆಗಳಲ್ಲಿ ‘ಕಾಂತಾರ’ 100 ಕೋಟಿ ರೂಪಾಯಿ ಬಾಚಿದೆ. ಈ ಮೂಲಕ ಚಿತ್ರ ಒಳ್ಳೆಯ ಕಮಾಯಿ ಮಾಡುತ್ತಿದೆ. ಮೂಲಗಳ ಪ್ರಕಾರ ತೆಲುಗು, ತಮಿಳು ಹಾಗೂ ಹಿಂದಿ ಸೇರಿ ಈ ಚಿತ್ರ 100 ಕೋಟಿ ರೂಪಾಯಿ ಬಾಚಿಕೊಂಡಿದೆ.

Also Read  ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮುಳುವಾಗಲಿದೆಯೇ ಸರಕಾರದ‌ ನೂತನ ಕಾನೂನು...? ► ಮಂತ್ರಿಗಳ, ಸರ್ಕಾರಿ ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುವುದು ಕಡ್ಡಾಯ..!

ಹಿಂದಿಯಲ್ಲಿ ಈ ಚಿತ್ರ ಅಬ್ಬರಿಸುತ್ತಿದೆ. ಈ ಬಗ್ಗೆ ಪಕ್ಕಾ ಲೆಕ್ಕ ಸಿಕ್ಕಿದೆ. ಗುರುವಾರ (ಅಕ್ಟೋಬರ್ 27) ಈ ಚಿತ್ರ ಬಾಲಿವುಡ್​ನಲ್ಲಿ 2.60 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಸಿನಿಮಾದ ಹಿಂದಿ ಭಾಗದ ಕಲೆಕ್ಷನ್ 31.70 ಕೋಟಿ ರೂಪಾಯಿ ಆಗಿದೆ. ಇದು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ. ಕನ್ನಡದ ಚಿತ್ರ ಬಾಲಿವುಡ್​ನಲ್ಲಿ ಇಷ್ಟು ಒಳ್ಳೆಯ ಗಳಿಕೆ ಮಾಡುತ್ತಿರುವುದು ಕರ್ನಾಟಕದವರ ಪಾಲಿಗೆ ಹೆಮ್ಮೆಯ ವಿಚಾರ.

error: Content is protected !!
Scroll to Top