(ನ್ಯೂಸ್ ಕಡಬ) newskadaba.com ಅ.25: ದೀಪಾವಳಿ ಹಬ್ಬದ ನಡುವೆಯೇ ಇಂದು (ಅ. 25) ಈ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಬರೋಬ್ಬರಿ 27 ವರ್ಷಗಳ ಬಳಿಕ ಇದೀಗ ಕೇತುಗ್ರಸ್ತ ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣವನ್ನು ಕೇತು ಖಗ್ರಾಸ ಸೂರ್ಯಗ್ರಹಣ, ಖಂಡಗ್ರಾಸ ಸೂರ್ಯಗ್ರಹಣ ಎಂದು ಕೂಡ ಕರೆಯಲಾಗುತ್ತದೆ. ಈ ಗ್ರಹಣ ಭಾರತದ ಹಲವು ಭಾಗಗಳಲ್ಲಿಯೂ ಗೋಚರವಾಗಲಿದೆ. ಬೆಂಗಳೂರು, ದೆಹಲಿ, ಕೊಲ್ಕತ್ತಾ, ಚೆನ್ನೈ, ವಾರಾಣಸಿ, ಮಥುರಾದಲ್ಲಿ ಈ ಗ್ರಹಣವನ್ನು ಕಾಣಬಹುದು.
ಕರ್ನಾಟಕದ ಬೆಂಗಳೂರು, ಉಡುಪಿ, ರಾಯಚೂರು ಸೇರಿದಂತೆ ಹಲವೆಡೆ ಇಂದು ಸೂರ್ಯಗ್ರಹಣ ಗೋಚರವಾಗುತ್ತದೆ. ಉಡುಪಿಯಲ್ಲಿ ಇಂದು ಸಂಜೆ 5.08ರಿಂದ 6.29ರವರೆಗೆ ಗ್ರಹಣ ಇರಲಿದೆ. ಬೆಂಗಳೂರಿನಲ್ಲಿ ಇಂದು ಸಂಜೆ 5.12 ಗಂಟೆಗೆ ಗ್ರಹಣ ಪ್ರಾರಂಭವಾಗಲಿದೆ. ಮೈಸೂರಿನಲ್ಲಿ ಸಂಜೆ 5.13 ಗಂಟೆಗೆ ಪ್ರಾರಂಭವಾಗಲಿದೆ. ಧಾರವಾಡದಲ್ಲಿ ಸಂಜೆ 5.01 ಗಂಟೆಗೆ, ರಾಯಚೂರಿನಲ್ಲಿ 5.01 ಗಂಟೆಗೆ, ಬಳ್ಳಾರಿಯಲ್ಲಿ ಸಂಜೆ 5.04 ಗಂಟೆಗೆ, ಬಾಗಲಕೋಟೆ- ಸಂಜೆ 5 ಗಂಟೆಗೆ, ಮಂಗಳೂರು- ಸಂಜೆ 5.10 ಗಂಟೆಗೆ ಗ್ರಹಣ ಪ್ರಾರಂಭವಾಗಲಿದೆ.