(ನ್ಯೂಸ್ ಕಡಬ) newskadaba.com ಅ.23: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಗ್ರಾಹಕರಿಗೆ ದೀಪಾವಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಎಸ್ ಬಿಐ ಸ್ಥಿರ ಠೇವಣಿಗಳ (ಎಫ್ ಡಿ) ಮೇಲಿನ ಬಡ್ಡಿದರವನ್ನು ಗರಿಷ್ಠ 80 ಮೂಲಾಂಕಗಳಷ್ಟು ಅಂದ್ರೆ ಶೇ.0.8ರಷ್ಟು ಏರಿಕೆ ಮಾಡಿದೆ. ಈ ಹೊಸ ದರವು 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎಫ್ ಡಿಗಳಿಗೆ ಅನ್ವಯಿಸಲಿದ್ದು, ಅಕ್ಟೋಬರ್ 22ರಿಂದಲೇ ಜಾರಿಗೆ ಬರಲಿದೆ.
ಎಸ್ ಬಿಐ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ, FD ಬಡ್ಡಿದರ ಹೆಚ್ಚಳ 25 ಮೂಲಾಂಕಗಳಿಂದ 80 ಮೂಲಾಂಕಗಳ ತನಕ ಇರಲಿದೆ. SBI ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಳ ಮಾಡುತ್ತಿರೋದು ಈ ತಿಂಗಳಲ್ಲಿ ಇದು ಎರಡನೇ ಬಾರಿ. ಈ ಹಿಂದೆ ಅಕ್ಟೋಬರ್ 15ರಂದು ಎಸ್ ಬಿಐ ಎಫ್ ಡಿ ಮೇಲಿನ ಬಡ್ಡಿದರವನ್ನು 20 ಮೂಲಾಂಕಗಳಷ್ಟು ಹೆಚ್ಚಳ ಮಾಡಿತ್ತು. ಹಿರಿಯ ನಾಗರಿಕರಿಗೆ ಕೂಡ ಇದರಿಂದ ಸಾಕಷ್ಟು ಪ್ರಯೋಜನ ಸಿಗಲಿದೆ. ಇನ್ನು 180 ರಿಂದ 210ದಿನಗಳ ಅವಧಿಯ FD ದರ ಶೇ.5.25ಕ್ಕೆ ಏರಿಕೆಯಾಗಿದೆ. 2 ವರ್ಷಕ್ಕಿಂತ ಹೆಚ್ಚಿನ & 3 ವರ್ಷಕ್ಕಿಂತ ಕಡಿಮೆ ಅವಧಿಯ FD ಬಡ್ಡಿದರ ಶೇ.6.25ಕ್ಕೆ ಏರಿಕೆಯಾಗಿದೆ.