ಕೊರಗಜ್ಜ ಹಿಂದೂ ಅಲ್ಲ ➤‌ ಕೊರಗಜ್ಜನಿಗೆ ನಟ ಚೇತನ್ ಅವಮಾನ

(ನ್ಯೂಸ್‌ ಕಡಬ) newskadaba.com ಬೆಂಗಳೂರು, ಅ.19: ರಿಷಬ್ ಶೆಟ್ಟಿ ಅವರ ನಟನೆ ಹಾಗೂ ನಿರ್ದೇಶನದ ಕಾಂತಾರ ಚಿತ್ರಕ್ಕೆ ನಟ ಚೇತನ್ ಅಹಿಂಸಾ ಮಾಡಿರುವ ಟ್ವೀಟ್ ಭಾರೀ ವಿವಾದವನ್ನು ಸೃಷ್ಟಿಸಿದೆ. ಈ ವಿವಾದದ ಬೆನ್ನಲ್ಲೇ ನಟ ಚೇತನ್​ ಕೊರಗಜ್ಜ ಹಿಂದೂ ಧರ್ಮಕ್ಕೆ ಸೇರಿದಲ್ಲ ಎಂಬ ಹೇಳಿಕೆ ನೀಡುವುದರ ಮೂಲಕ ಕೊರಗಜ್ಜನಿಗೆ ಅವಮಾನಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ನಟ ಚೇತನ್​, ಕೊರಗಜ್ಜ ಹಿಂದೂ ಅಲ್ಲ, ಕೊರಗಜ್ಜ ಹಿಂದೂ ಧರ್ಮದ ಭಾಗವಲ್ಲ. ಕೊರಗಜ್ಜನನ್ನು ಹಿಂದೂ ಧರ್ಮದಿಂದ ಹೊರತೆಗೆಯಬೇಕು ಎಂಬ ಹೇಳಿಕೆ ನೀಡುವ ಮೂಲಕ ನಟ ಕೊರಗಜ್ಜನಿಗೂ ಅವಮಾನ ಮಾಡಿದ್ದಾರೆ. ಕೊರಗಜ್ಜನ ಆರಾಧಿಸುವ ಕೊರಗರು ಶೋಷಿತರು,ಅಸ್ಪೃಶ್ಯರಿಗೂ ಅಸ್ಪೃಶ್ಯರಾಗಿದ್ದ ಕೊರಗ ಸಮುದಾಯದವರು, ಬಲಾಢ್ಯ ಜಾತಿಗಳ ಹುನ್ನಾರದಿಂದ ಹಿಂದೂ ಧರ್ಮದ ಭಾಗ ಎನ್ನಲಾಗ್ತಿದೆ. ಕೊರಗ ಸಂಸ್ಕೃತಿ ಹಿಂದೂ ಧರ್ಮ ಹೈಜಾಕ್ ಮಾಡಿದೆ ಎಂದು ನಟ ಚೇತನ್ ಹೇಳಿದ್ದಾರೆ.

Also Read  ಸಂಪಾಜೆಯಲ್ಲಿ ನಕ್ಸಲರು ಪ್ರತ್ಯಕ್ಷರಾದ ಹಿನ್ನೆಲೆ ► ಗುಡ್ಡೆಗದ್ದೆ ಪರಿಸರದಲ್ಲಿ ಕೂಂಬಿಂಗ್ ಆರಂಭ

<img src="https://newskadaba.com/wp-content/uploads/2022/10/IMG-20221017-WA0035-232×300.jpg" alt="" width="232" height="300" class="alignnone size-medium wp-image-61676" /

error: Content is protected !!
Scroll to Top