ಕರ್ನಾಟಕದಲ್ಲೂ ಸೀಟ್ ಬೆಲ್ಟ್ ಕಡ್ಡಾಯ ➤‌ ಧರಿಸದಿದ್ರೆ ದಂಡ, ಕೇಂದ್ರದ ಆದೇಶ ಜಾರಿ !

(ನ್ಯೂಸ್‌ ಕಡಬ) newskadaba.com ಬೆಂಗಳೂರು, ಅ.19: ಚಾಲಕನ ಹಿಂಬಂದಿ ಕುಳಿತು ಪ್ರಯಾಣ ಮಾಡುವವರು ಕೂಡ ಇನ್ನು ಮುಂದೆ ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಒಂದು ವೇಳೆ ನಿಯಮ ಮೀರಿ ಸೀಟ್ ಬೆಲ್ಟ್ ಹಾಕದೆ ಪ್ರಯಾಣ ಮಾಡಿದರೆ ಪೊಲೀಸ್​ ಇಲಾಖೆ 1000 ರೂ ದಂಡ ವಿಧಿಸುತ್ತದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ಮೇರೆಗೆ ಪೊಲೀಸ್ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಪೊಲೀಸ್ ಇಲಾಖೆ ದಂಡವನ್ನು 500 ರಿಂದ 1 ಸಾವಿರ ರೂಪಾಯಿಗೆ ಏರಿಸಿದೆ. ಈ ಮೊದಲು ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದರೆ 500ರೂ ದಂಡ ಹಾಕಲಾಗುತ್ತಿತ್ತು. ಆದರೆ ಈಗ ನಿಯಮ ಮೀರಿದವರಿಗೆ 1000 ದಂಡ ವಿಧಿಸುವಂತೆ ರಾಜ್ಯದ ಎಲ್ಲಾ ಕಮೀಷನರೇಟ್ & ಎಸ್​ಪಿಗಳಿಗೆ ಪೊಲೀಸ್​ ಇಲಾಖೆ ಸೂಚನೆ ನೀಡಿದೆ. ಇಂದಿನಿಂದಲೇ ರಾಜ್ಯದಲ್ಲಿ ನಿಯಮ ಜಾರಿಗೆಯಾಗಿದೆ.

Also Read  GST ವಂಚನೆ ಮಾಸ್ಟರ್ ಮೈಂಡ್ ಗಳನ್ನು ಬಂಧಿಸಲು ಹೊಸ ತಂತ್ರ: ತೆರಿಗೆ ಇಲಾಖೆ ಆಯುಕ್ತೆ ಶಿಖಾ

error: Content is protected !!
Scroll to Top