ಇಂದಿನಿಂದ ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ದಿವಾಳಿ ಸೇಲ್ ➤‌ ಸ್ಮಾರ್ಟ್​ಫೋನ್​ಗಳ ಮೇಲೆ ಧಮಾಕ ಆಫರ್

(ನ್ಯೂಸ್ ಕಡಬ) newskadaba.com ಅ.19: ದೇಶದ ಪ್ರಸಿದ್ಧ ಇ ಕಾಮರ್ಸ್ ಸಂಸ್ಥೆಗಳಲ್ಲಿ ದೀಪಾವಳಿ ಪ್ರಯುಕ್ತ ಮೇಳಗಳು ಶುರುವಾಗಿದೆ. ಫ್ಲಿಪ್‌ಕಾರ್ಟ್ ನಲ್ಲಿ ಇಂದಿನಿಂದ ಬಿಗ್ ದಿವಾಳಿ ಸೇಲ್ ಲೈವ್ ಆಗಿದೆ. ಪ್ಲಸ್ ಬಳಕೆದಾರರು ನಿನ್ನಯೇ ಈ ಮೇಳದ ಪ್ರಯೋಜನ ಪಡೆದಿದ್ದರು. ಈ ಅವಧಿಯಲ್ಲಿ ಹೊಸ ಗ್ಯಾಜೆಟ್ ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ಡಿಸ್ಕೌಂಟ್ ಮತ್ತು ವಿಶೇಷ ಕೊಡುಗೆ ಲಭ್ಯವಾಗಲಿದೆ.

ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಮಾರಾಟದಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಶೇ. 45 ರ ತನಕ ರಿಯಾಯಿತಿ ನೀಡುತ್ತದೆ. ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಶೇ. 80 ರ ವರೆಗೆ ಡಿಸ್ಕೌಂಟ್ ಘೋಷಿಸಲಾಗಿದೆ. ಈ ರಿಯಾಯಿತಿ ಒಳಗೆ ಸ್ಮಾರ್ಟ್ ವಾಚ್‌ಗಳು, ಹೆಡ್‌ಫೋನ್‌ಗಳು, ವೈರ್‌ಲೆಸ್ ಇಯರ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಸೇರಿದಂತೆ ಅನೇಕ ಪ್ರಾಟಕ್ಟ್ ಸೇರಿವೆ.

Also Read  ಕೊಂದಪಡೆ ಶ್ರೀ ಅನಂತಪದ್ಮನಾಭೇಶ್ವರ ದೇವಳದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ವಿಶೇಷ ಪೂಜೆ

ಲ್ಯಾಪ್‌ಟಾಪ್‌ ಮೇಲೆ ಶೇ. 50 ರಷ್ಟು ರಿಯಾಯಿತಿ ಇದೆ. ಬಲಿಷ್ಠವಾದ ಗೇಮಿಂಗ್ ಲ್ಯಾಪ್‌ಟಾಪ್‌ಗಳು ರೂ. 50,990 ರಿಂದ ಮಾರಾಟವಾಗುತ್ತವೆ. ಪ್ರಿಂಟರ್‌ಗಳು ಮತ್ತು ಮಾನಿಟರ್‌ಗಳು ಮಾರಾಟದಲ್ಲಿ ಶೇ. 80 ರಷ್ಟು ರಿಯಾಯಿತಿ ಲಭ್ಯ ಇರುತ್ತವೆ. ಮುಖವಾಗಿ ಈ ಸೇಲ್‌ನಲ್ಲಿ ಆ್ಯಪಲ್‌ ಐಫೋನ್‌ 13, ಐಫೋನ್‌ 13 ಮಿನಿ, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22+, ರಿಯಲ್‌ಮಿ 9i 5G ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ರಿಯಾಯಿತಿ ನೀಡಲಾಗುತ್ತದೆ. ಐಫೋನ್ 13 128GB ಮಾಡೆಲ್ ಅನ್ನು ನೀವು ದಿವಾಳಿ ಸೇಲ್​ನಲ್ಲಿ 69,990 ರೂ. ಬದಲಾಗಿ 59,990 ರೂ. ಗೆ ಖರೀದಿಸಬಹುದು. ಇದರ ಮೇಲೆ 10,000 ರೂ. ಗಳ ರಿಯಾಯಿತಿ ಘೋಷಿಸಲಾಗಿದೆ.

error: Content is protected !!
Scroll to Top