ಬೆಳ್ತಂಗಡಿ: ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಲಕ್ಷದೀಪೋತ್ಸವದ ಸಂಭ್ರಮ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.14. ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಐದು ದಿನಗಳ ದೀಪಗಳ ಉತ್ಸವಕ್ಕೆ ಚಾಲನೆ ದೊರತಿದ್ದು,  ಕ್ಷೇತ್ರದ ಪರಿಸರ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.

ದೀಪೋತ್ಸವದ ವೇಳೆ ಕ್ಷೇತ್ರದ ಮುಖ್ಯ ದೇವರು ಮಂಜುನಾಥ, ಕ್ಷೇತ್ರದ ಹೊರಗೆ ಬಂದು ಭಕ್ತರಿಂದ ಪೂಜೆ ಪಡೆಯುವುದು ಇಲ್ಲಿನ ವಿಶೇಷ. ಕ್ಷೇತ್ರದ ಪರಿಸರದಲ್ಲಿ ದೇವರನ್ನು ಒಂದೊಂದು ಕಟ್ಟೆಯಲ್ಲಿಟ್ಟು ಪೂಜಿಸುತ್ತಾರೆ. ದೇವರ ಪೂಜಾ ಕಾರ್ಯಗಳು ಪ್ರತಿದಿನ ಬೆಳಗ್ಗೆ 5.30ಕ್ಕೆ ಆರಂಭವಾಗಲಿದೆ.

ನವೆಂಬರ್ 16 ಮತ್ತು 17ರಂದು ನಡೆಯುವ 85ನೇ ವರ್ಷದ ಸರ್ವ ಧರ್ಮ ಸಮ್ಮೇಳನವನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಉದ್ಘಾಟನೆ ಮಾಡಲಿದ್ದಾರೆ.

Also Read  ಗಣೇಶ ಹಬ್ಬ ಆಚರಣೆ ಹಿನ್ನಲೆ ➤ ದುರ್ಗಂಬಿಕಾ ಅಮ್ಮನವರ ಸನ್ನಿಧಿಯಲ್ಲಿ ಗಣಹೋಮ ,ವಿಶೇಷ ಪೂಜೆ

ನವೆಂಬರ್ 17 ರಂದು ಸಾಹಿತ್ಯ ಸಮ್ಮೇಳ ಆರಂಭವಾಗಲಿದೆ. ಬರಹಗಾರ್ತಿ ಸುಧಾ ಮೂರ್ತಿ ಅವರು ಸಮ್ಮೇಳನದ ಉದ್ಘಾಟನೆ ಮಾಡಲಿದ್ದಾರೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ನಡೆಯುವ ಈ ಅದ್ಭುತ ಕ್ಷಣಗಳಿಗೆ ಧರ್ಮಸ್ಥಳ ಸಾಕ್ಷಿಯಾಗುತ್ತಿದೆ.

 

error: Content is protected !!
Scroll to Top