ಕಡಬ: ರೀಜನಲ್ ಎಸ್‍ಎಂಎ ಸಮಾವೇಶ ►ಪೂರ್ವಭಾವಿ ಸಭೆ

(ನ್ಯೂಸ್ ಕಡಬ) newskadaba.com ಕಡಬ, ನ.14. ಸುನ್ನೀ ಮೆನೇಜ್‍ಮೆಂಟ್ ಅಸೋಶಿಯೇಶನ್‍ನ ಕಡಬ ರೀಜನಲ್ ಸಮಾವೇಶವು ನ.17ರಂದು ಶುಕ್ರವಾರ ಕಡಬ ಕೇಂದ್ರ ಜುಮ್ಮಾ ಮಸೀದಿಯಲ್ಲಿ ನಡೆಯಲಿದ್ದು ಅದರ ಪೂರ್ವಭಾವಿ ಸಭೆಯು ಆದಿತ್ಯವಾರ ಅಡ್ಡಗದ್ದೆ ಅಲ್‍ಮದೀನ ಮಸೀದಿಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಕಡಬ ರೀಜನಲ್ ಉಪಾಧ್ಯಕ್ಷರಾದ ಖಾದರ್ ಸಾಹೇಬ್ ಕಲ್ಲುಗುಡ್ಡೆಯವರು ವಹಿಸಿ ಮಾತನಾಡಿ ಇದೇ ನ.21 ರಂದು ಪುತ್ತೂರು ಟೌನ್‍ಹಾಲ್‍ನಲ್ಲಿ ಜಿಲ್ಲಾ ಮಟ್ಟದ ಸಮಾವೇಶವು ನಡೆಯಲಿದ್ದು ಈಗಾಗಲೇ ನಮ್ಮ ರೀಜನಲ್ ವ್ಯಾಪ್ತಿಯ ಎಲ್ಲಾ ಮದರಸಗಳಲ್ಲಿ ರಕ್ಷಕ-ಶಿಕ್ಷಕ ಸಭೆ ನಡೆಸಲಾಗಿದೆ. ಹಾಗೂ ಇದೇ ನ.17ರ ಶುಕ್ರವಾರ ಅಪರಾಹ್ನ ನಮ್ಮ ರೀಜನಲ್ ಸಮಾವೇಶವನ್ನು ಕಡಬ ಕೇಂದ್ರ ಜುಮ್ಮಾ ಮಸೀದಿಯ ಸಭಾಂಗಣದಲ್ಲಿ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ನಮ್ಮ ವ್ಯಾಫ್ತಿಗೊಳಪಡುವ ಪ್ರತಿಯೊಂದು ಸುನ್ನಿ ಮೆನೇಜ್‍ಮೆಂಟ್ ಮದರಸಗಳ ರಕ್ಷಕ ಶಿಕ್ಷಕರು, ಮಸೀದಿಗಳ ಆಡಳಿತ ಮಂಡಳಿಯವರು, ಖತೀಬರು, ಮುಹಲ್ಲಿಂಗಳು, ಭಾಗವಹಿಸುವುದರೊಂದಿಗೆ ದೀನಿ ಶಿಕ್ಷಣದಲ್ಲಿ ಪೋಷಕರ ಮಹತ್ವವನ್ನು ಅರಿತುಕೊಳ್ಳಬೇಕಾಗಿ ತಿಳಿಸಿದರಲ್ಲದೆ ನಮ್ಮ ಕಡಬದ ಸಮಾವೇಶ ಜಿಲ್ಲೆಗೆ ಮಾದರಿಯಾಗುವಂತೆ ಎಲ್ಲರು ಸಹಕರಿಸಬೇಕೆಂದರು.

Also Read  ವಿಧ್ವಂಸಕ ಕೃತ್ಯಕ್ಕೆ ಶಂಕಿತ ಉಗ್ರರ ಪ್ಲ್ಯಾನ್ ವಿಫಲ- ಕಮಿಷನರ್ ನಿಂದ ಸ್ಪೋಟಕ ಮಾಹಿತಿ ಬಹಿರಂಗ..!

ಮರ್ದಾಳ ತಕ್ವೀಯತುಲ್ ಇಸ್ಲಾಂ ಮಸೀದಿ ಖತೀಬರಾದ ಕಡಬ ರೇಂಜ್‍ನ ಅಧ್ಯಕ್ಷ ಹನೀಫ್ ಸಖಾಫಿ ಉದ್ಘಾಟಿಸಿ ದುಃವಾಶೀರ್ವಚನ ನೀಡಿದರು. ಎಸ್‍ಎಂಎ ಗೌರವ ಸಲಹೆಗಾರರಾದ ಹಾಜಿ ಸಯ್ಯದ್ ಮೀರಾ ಸಾಹೇಬ್ ಮಾರ್ಗದರ್ಶನ ನೀಡಿದರು. ಕೋಶಾಧಿಕಾರಿ ಅಬ್ದುಲ್ ಹಕೀಂ ಮದನಿ ಕಲ್ಲಾಜೆ, ಕಡಬ ಕೇಂದ್ರ ಜುಮ್ಮಾ ಮಸೀದಿ ಉಪಾಧ್ಯಕ್ಷ ಆದಂ ಕುಂಡೋಳಿ, ಅಬ್ಬಾಸ್ ಕೋಡಿಂಬಾಳ, ಅಬ್ದುಲ್ ರಝಾಕ್ ಬಾಖವಿ, ಅಬ್ದುಲ್ ಅಝೀಜ್ ಲತೀಫಿ ಕಲ್ಲಾಜೆ, ಇಬ್ರಾಹಿಂ ಸಹದಿ ಮರ್ದಾಳ, ಪಿ.ಕೆ ಮಹಮ್ಮದ್ ಮುಸ್ಲಿಯಾರ್ ಸುಂಕದಕಟ್ಟೆ, ಸಯ್ಯದ್ ಇಕ್ಬಾಲ್ ಅಡ್ಡಗದ್ದೆ, ಕಲ್ಲಾಜೆ ಜುಮ್ಮಾ ಮಸೀದಿ ಅಧ್ಯಕ್ಷ ಉಬೈದುಲ್ಲಾ ಸಖಾಫಿ, ಸತ್ತಾರ್ ಮರ್ದಾಳ, ಶುಕೂರು ಅಡ್ಡಗದ್ದೆ ವಿವಿಧ ಸಲಹೆ ಸೂಚನೆ ನೀಡಿದರು. ಅಬ್ದುಲ್ ನಾಸಿರ್ ಸಹದಿ ಮರ್ದಾಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ರಫ್ ಜೌಹರಿ ಕೋಡಿಂಬಾಳ ವಂದಿಸಿದರು.

Also Read  ಮುರಿದು ಬೀಳುವ ಸ್ಥಿತಿಯಲ್ಲಿ ಕಂದ್ರಪ್ಪಾಡಿ ಅಂಚೆ ಕಚೇರಿ

error: Content is protected !!
Scroll to Top