ವಿಟ್ಲ: ಮಂತ್ರವಾದಿ ಜೊತೆ ಪರಾರಿ ಎಂದು ಶಂಕಿಸಲಾಗಿದ್ದ ಯುವತಿ ಚಿಕ್ಕಮಗಳೂರಿನಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ವಿಟ್ಲ, ಜು. 26. ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದಿಂದ ನಾಪತ್ತೆಯಾಗಿದ್ದ ಯುವತಿಯನ್ನು ವಿಟ್ಲ ಠಾಣಾ ಪೊಲೀಸರು ಚಿಕ್ಕಮಗಳೂರಿನಲ್ಲಿ ಪತ್ತೆ ಹಚ್ಚಿದ್ದಾರೆ.

ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಬಸಬೆಟ್ಟು ನಿವಾಸಿ ರಝಾಕ್ ಎಂಬವರ ಪುತ್ರಿ ಜು.22ರಂದು ತನ್ನ ಮನೆಯಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಅವರ ಸಹೋದರ, ಆಕೆ ವಿಟ್ಲದ ನೆಲ್ಲಿಗುಡ್ಡೆಯ ಪುತ್ತೂರು ಮುಕ್ವೆ ಮೂಲದ ಮಂತ್ರವಾದಿ ಜೊತೆ ತೆರಳಿರುವುದಾಗಿ ಅಬ್ದುಲ್ ಶರೀಫ್‌ ರವರು ವಿಟ್ಲ ಠಾಣೆಗೆ ನೀಡಿದ ದೂರಿನಲ್ಲಿ ಶಂಕೆ ವ್ಯಕ್ತಪಡಿಸಿದ್ದರು. ಅದರಂತೆ ನಾಪತ್ತೆ ಪ್ರಕರಣ ದಾಖಲಿಸಿದ ಪೊಲೀಸರು ಹುಡುಕಾಟ ಆರಂಭಿಸಿ ಆಕೆಯನ್ನು ಚಿಕ್ಕಮಗಳೂರಿನಲ್ಲಿ ಪತ್ತೆ ಹಚ್ಚಿ, ಬಳಿಕ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿ ಯುವತಿಯನ್ನು ಆಕೆಯ ಪೋಷಕರೊಂದಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.

Also Read  ಮಲೇರಿಯಾ ಮುಕ್ತದತ್ತ "ಕರಾವಳಿ' !!! ➤ ಸಾವಿರದಷ್ಟಿದ್ದ ಮಲೇರಿಯಾ ಈಗ ಬಹು ಪ್ರಮಾಣದಲ್ಲಿ ಇಳಿಕೆ

error: Content is protected !!
Scroll to Top