ಆ. 15ರಂದು ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದ ಪೆರೇಡ್ ನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸುಳ್ಯದ ಸಾಹಿತ್ಯ ಆಯ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 25. ಆಗಸ್ಟ್ 15ರಂದು ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರ್ನಾಟಕ ತಂಡವು ನೃತ್ಯ ಪ್ರದರ್ಶನ ನೀಡಲಿದ್ದು, ಈ ತಂಡದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಸುಳ್ಯದ ಸಾಹಿತ್ಯ ಪುರುಷೋತ್ತಮ್ ಭಾಗವಹಿಸಲಿದ್ದಾರೆ.

 

ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪ್ರಥಮ ಬಿಬಿಎ ವ್ಯಾಸಂಗ ಮಾಡುತ್ತಿರುವ ಸಾಹಿತ್ಯ ಎನ್.ಸಿ.ಸಿ. ತಂಡದ ವಿದ್ಯಾರ್ಥಿನಿ. ಈಕೆ ಇತ್ತೀಚೆಗೆ ನಡೆದ ಎನ್.ಸಿ.ಸಿ. ಕ್ಯಾಂಪ್‌ನಲ್ಲಿ ನೀಡಿದ ನೃತ್ಯ ಪ್ರದರ್ಶನವು ಆಯ್ಕೆಗಾರರ ಗಮನ ಸೆಳೆದಿತ್ತು. ಮಂಗಳೂರು, ಉಡುಪಿ, ಕೊಡಗು ಈ ಮೂರು ಜಿಲ್ಲೆಯ ಎನ್‌ಸಿಸಿ ತಂಡದಿಂದ ಇಬ್ಬರು ಆಯ್ಕೆಯಾಗಿದ್ದು, ಅವರ ಪೈಕಿ ಸಾಹಿತ್ಯ ಒಬ್ಬರು. ಸಾಹಿತ್ಯ ಇದೀಗ ಬೆಂಗಳೂರಿನಲ್ಲಿ ರಾಜ್ಯ ತಂಡದೊಂದಿಗೆ ತರಬೇತಿ ಪಡೆಯುತ್ತಿದ್ದು ಜು.28ರಂದು ಕರ್ನಾಟಕ ತಂಡದೊಂದಿಗೆ ದೆಹಲಿಗೆ ಪ್ರಯಾಣಿಸಲಿದ್ದಾರೆ. ಈಕೆ ಸುಳ್ಯದ ಪಿಗ್ಮಿ ಸಂಗ್ರಾಹಕಿ ಹಾಗೂ ಗಾಯಕಿ ಕೇರ್ಪಳದ ಆರತಿ ಹಾಗೂ ಪುರುಷೋತ್ತಮ್ ದಂಪತಿ ಪುತ್ರಿ.

Also Read  ಕಡಬ: ಅಧಿಕಾರಿಗಳಿಂದ ದೌರ್ಜನ್ಯಕ್ಕೊಳಗಾದ ಪ್ರಸಾದ್ ಮನೆಗೆ ಸಾಮಾಜಿಕ ಕಾರ್ಯಕರ್ತರ ಭೇಟಿ ➤ ಹೋರಾಟಕ್ಕೆ ಸಿದ್ದತೆ

error: Content is protected !!
Scroll to Top