ಬಂಟ್ರ: ಕಾಂಗ್ರೆಸ್‍ನಿಂದ ಮನೆಮನೆ ಭೇಟಿ ಕಾರ್ಯಕ್ರಮ ►ರಾಜ್ಯ ಸರಕಾರದ ಸಾಧನಾ ಕೈಪಿಡಿ ವಿತರಣೆ 

(ನ್ಯೂಸ್ ಕಡಬ) newskadaba.com ಕಡಬ, ನ.13. ಕಾಂಗ್ರೆಸ್ ವತಿಯಿಂದ ರಾಜ್ಯ ಸರಕಾರದ ಸಾಧನೆಯನ್ನು ಮನೆಮನೆಗೆ ಭೇಟಿ ನೀಡಿ ತಿಳಿಸುವ ಕಾರ್ಯಕ್ರಮ ಹಾಗೂ ಸಾಧನೆಗಳ ಕೈಪಿಡಿ ಹಂಚುವ ಕಾರ್ಯಕ್ರಮ ಬಂಟ್ರ ಗ್ರಾಮದಲ್ಲಿ ನಡೆಸಲಾಯಿತು.

ಬಂಟ್ರ ಗ್ರಾಮದ ಚಾಕೋಟೆಕೆರೆಯಲ್ಲಿ ಮರ್ದಾಳ ಗ್ರಾ.ಪಂ.ಮಾಜಿ ಉಪಾಧ್ಯಕ್ಷರಾದ ಮಹಮ್ಮದ್‍ರವರಿಗೆ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್‍ರವರು ಸಾಧನಾ ಕೈಪಿಡಿ ನೀಡಿಚಾಲನೆ ನೀಡಿ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಚಾಚೂ ತಪ್ಪದೆ ಜನರಿಗೆ ನೀಡಿದ ಕಾಂಗ್ರೆಸ್‍ನ ಸಿದ್ದರಾಮಯ್ಯ ಸರಕಾರ ಅನೇಕ ಜನಪರ ಯೋಜನೆಗಳನ್ನು ನೀಡಿದೆ. ಪಕ್ಷದ ಸಾಧನೆಗಳ ಬಗ್ಗೆ ಪ್ರತಿಯೊಬ್ಬ ಮತದಾರರಿಗೆ ತಿಳಿಯಪಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ತಾ.ಪಂ.ಸದಸ್ಯರಾದ ಗಣೇಶ್ ಕೈಕುರೆಯವರು ಪಕ್ಷದ ಧ್ವಜ ನೀಡಿ ಮಾತನಾಡಿ ಮನೆ ಮನೆ ಭೇಟಿ ಮೂಲಕ ರಾಜ್ಯ ಸರಕಾರದ ಸಾಧನೆಗಳನ್ನು ತಿಳಿಸುವುದರೊಂದಿಗೆ ಯಾವುದೇ ಜನಪರ ಯೋಜನೆ ಇಲ್ಲದೆ ನೋಟ್ ಅಮಾನ್ಯ, ಜಿಎಸ್‍ಟಿ ಯಂತಹ ಹೊರೆಯನ್ನು ಜನರ ಮೇಲೆ ಏರಿ ದಿನನಿತ್ಯದ ಗ್ಯಾಸ್, ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನಬಳಕೆಯ ಸಾಮಾಗ್ರಿಗಳ ಮೇಲೆ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿರುವ ಕೇಂದ್ರದ ನರೇಂದ್ರ ಮೋದಿ ಸರಕಾರ ಬರೇ ಪ್ರಚಾರದಲ್ಲಿ ಮೇಲುಗೈ ಸಾಧಿಸುತ್ತಿದೆ ಎಂದ ಅವರು ಪ್ರತಿಮನೆಯವರಿಗೆ ನಮ್ಮ ರಾಜ್ಯ ಸರಕಾರದ ಸಾಧನೆ ಅರಿವು ಮುಟ್ಟಿಸಬೇಕೆಂದರು.

Also Read  ದ. ಕ ಹಾಗೂ ಉಡುಪಿಯಲ್ಲಿ ಭಾನುವಾರ ಲಾಕ್‌ಡೌನ್‌ ಮುಂದುವರಿಯಲಿದೆ ➤ ಜಿಲ್ಲಾಧಿಕಾರಿ ಸ್ಪಷ್ಟನೆ

 ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್ ರೈ, ಕೇಂದ್ರ ಸರಕಾರದ ಯೋಜನೆಗಳು ಏನಿಲ್ಲದಿದ್ದರೂ  ಆ ಪಕ್ಷದ ನಾಯಕರು, ಪ್ರಚಾರ ಪ್ರಿಯರಾಗಿದ್ದಾರೆ. ಆದರೆ ನಾವು ಕೊಟ್ಟದನ್ನು ಮತದಾರರಿಗೆ ಪ್ರಚಾರ ಪಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು. ಬಂಟ್ರ ಗ್ರಾಮದ ಉಸ್ತುವಾರಿ ಐತ್ತೂರು ಗ್ರಾ.ಪಂ.ಸದಸ್ಯ ಯೂಸುಫ್ ಎಂ.ಪಿ ಯವರು ಮನೆಗೆ ಪಕ್ಷದ ಸ್ಟಿಕ್ಕರ್ ನೀಡಿ ಪಕ್ಷದ ಸಾಧನೆಗಳನ್ನು ಪ್ರತಿಯೊಬ್ಬರಲ್ಲಿ ತಿಳಿಯಪಡಿಸಬೇಕೆಂದು ವಿನಂತಿಸಿಕೊಂಡರು.

ಮರ್ದಾಳ ಗ್ರಾ.ಪಂ.ವ್ಯಾಪ್ತಿ ಅಧ್ಯಕ್ಷ ವೆಂಕಟರಮಣ ಗೌಡ ಪಾಂಗ, 102 ನೆಕ್ಕಿಲಾಡಿ ಗ್ರಾಮದ ಬೂತ್ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ನಡುಮಜಲು, ಯುವ ಕಾಂಗ್ರೆಸ್ ಮುಂದಾಳು ಮಹಮ್ಮದ್ ಶಾಖಿರ್, ಮಹಿಳಾ ಮುಖಂಡೆ ಮರ್ದಾಳ ಗ್ರಾ.ಪಂ.ಸದಸ್ಯೆ ಮೀನಾಕ್ಷಿ ಆಚಾರ್, ಅಬ್ಬಾಸ್ ಪಿಲಿಮಜಲು, ಅಜೀಜ್ ಪಾಲೆತ್ತಡ್ಕ, ಅಬ್ದುಲ್ ರಹ್‍ಮಾನ್ ಮರ್ದಾಳ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top