ಬೆಳಗಾವಿ ಚಲೋ ಕಾರ್ಯಕ್ರಮದಲ್ಲಿ ಪುತ್ತೂರಿನ ವೈದ್ಯರುಗಳು ಭಾಗಿ..!!!

(ನ್ಯೂಸ್ ಕಡಬ) newskadaba.com ಪುತ್ತೂರು, ನ.13.: ರಾಜ್ಯ ಸರಕಾರವು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆ.ಪಿ.ಎಂ.ಇ) ಕಾಯ್ದೆಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ಖಾಸಗಿ ವಲಯದ ವೈದ್ಯರು ಇಂದು ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪುತ್ತೂರಿನಿಂದಲೂ ವೈದ್ಯರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ಸೋಮವಾರ(ಇಂದಿನಿಂದ) ಬೆಳಗಾವಿಯಲ್ಲಿ ರಾಜ್ಯ ವಿಧಾನ ಮಂಡಲದ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಚಲೋ ಕಾರ್ಯಕ್ರಮ ನಡೆಯಲಿದೆ. ಇದರಿಂದ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯರಿರುವ ಸಾಧ್ಯತೆ ಕಡಿಮೆ ಇದ್ದು, ಹೊರರೋಗಿಗಳ ವಿಭಾಗವೂ ಮುಚ್ಚಿರುತ್ತದೆ. ಸರಕಾರದಿಂದ ಸ್ಪಂದನೆ ಸಿಗದಿದ್ದರೆ ಮಂಗಳವಾರ (ನ.14ರ) ಬಳಿಕ ವೈದ್ಯರು ಬೆಳಗಾವಿಯಲ್ಲಿ ತಂಡವಾಗಿ ಸರಣಿ ಉಪವಾಸ ಸತ್ಯಾಗ್ರಹ ಮಾಡಲಿದ್ದಾರೆ. ಇದರಿಂದ ಆರೋಗ್ಯ ವಲಯದಲ್ಲಿ ತೊಂದರೆ ಆದರೆ ರಾಜ್ಯ ಸರಕಾರವೇ ಹೊಣೆ ಎಂದು ಪುತ್ತೂರಿನ ಭಾರತೀಯ ವೈದ್ಯಕೀಯ ಸಂಘ, ಭಾರತೀಯ ದಂತ ವೈದ್ಯರ ಸಂಘ, ಪುತ್ತೂರು ಆಯುಷ್ ವೈದ್ಯರ ಸಂಘ, ಡಾಕ್ಟರ್‍ಸ್ ಫೋರಮ್ ತಿಳಿಸಿದೆ. ಜುಲ್ಮಾನೆ, ಪರಿಹಾರ, ಬಂಧನ ಹಾಗೂ ಶಕ್ತಿಗಳ ಭೀತಿಯನ್ನು ವಿರೋಧಿಸಿ ವೈದ್ಯರಿಂದ ಈ ಹೋರಾಟ ನಡೆಯುತ್ತಿದೆ.

Also Read  ಕೊರೋನಾ ಭೀತಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್

ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ಅಧ್ಯಕ್ಷರಾದ, ನರಮಾನಸಿಕ ತಜ್ಣ ಡಾ. ಗಣೇಶ್ ಪ್ರಸಾದ್ ಮುದ್ರಾಜೆ, ಪ್ರಗತಿ ಆಸ್ಪತ್ರೆ ಯ ಡಾ. ಶ್ರೀಪತಿ ರಾವ್, ಡಾ. ಸುಧಾ ಎಸ್. ರಾವ್, ಪುತ್ತೂರು ಸಿಟಿ ಆಸ್ಪತ್ರೆ ಯ ಡಾ. ಗೋಪಿನಾಥ ಪೈ, ಧನ್ವಂತರಿ ಆಸ್ಪತ್ರೆಯ ಡಾ. ರವೀಂದ್ರ, ಸತ್ಯಸಾಯಿ ಆಸ್ಪತ್ರೆಯ ಡಾ. ಸತ್ಯಸುಂದರ್, ಡಾ. ಅನಿಲ್ ಬೈಪಡಿತ್ತಾಯ, ಕಿವಿ ಮೂಗು ಗಂಟಲು ತಜ್ಣ ಡಾ. ಈಶ್ವರ ಪ್ರಕಾಶ್ ಸೇರಿದಂತೆ ಪುತ್ತೂರಿನ ಹೆಚ್ಚಿನ ಎಲ್ಲಾ ವೈದ್ಯರುಗಳು ಚಲೋದಲ್ಲಿ ಭಾಗವಹಿಸಿದ್ದಾರೆ.

Also Read  ಕಡಬ: ದಲಿತರನ್ನು ಬೌದ್ಧ ಧರ್ಮಕ್ಕೆ ಬಲವಂತದಿಂದ ಮತಾಂತರಿಸಲಾಗಿದೆ ► ಸಾಮಾಜಿಕ ಕಾರ್ಯಕರ್ತ ತಿಮ್ಮಪ್ಪ ವಿ.ಕೆ. ಆರೋಪ

error: Content is protected !!
Scroll to Top