ಬೆಳ್ತಂಗಡಿಯಲ್ಲೊಂದು ಅಪರೂಪದ ಘಟನೆ ► ನಾಯಿ ಮರಿಗಳಿಗೆ ಹಾಲುಣಿಸುತ್ತಿರುವ ಬೆಕ್ಕು..!!!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.13. ಬೆಕ್ಕು ಮತ್ತು ನಾಯಿ ಪರಮ ಶತ್ರುಗಳು ಅಂತಾ ಹಿರಿಯರು ಹೇಳುತ್ತಾರೆ. ಆದರೆ ಇಲ್ಲೊಂದು  ಅಚ್ಚರಿ ಎಂಬಂತೆ ಬೆಕ್ಕು ಸುಮಾರು 6 ನಾಯಿ ಮರಿಗಳಿಗೆ ಹಾಲುಣಿಸಿ ತಾಯಿಯ ಪ್ರೀತಿಯನ್ನು ತೋರಿಸುತ್ತಿದೆ.

ಬೆಳ್ತಂಗಡಿ ತಾಲೂಕಿನ ಸೋಮಂತಡ್ಕ ನಿವಾಸಿ ಮೋಹನ್ ನಾಯ್ಕ್ ಎಂಬವರ ಮನೆಯ ಬೆಕ್ಕು ಪ್ರತಿದಿನ ಬೆಳಿಗ್ಗೆ ನಾಯಿಮರಿಗಳಿಗೆ ಹಾಲು ನೀಡುತ್ತಿದೆ.

ಈ ಬೆಕ್ಕು ಸುಮಾರು 5 ರಿಂದ 6 ನಾಯಿಮರಿಗಳಿಗೆ ಪ್ರತಿದಿನ ಹಾಲನ್ನು ಕುಡಿಸುತ್ತದೆ. ತಾಯಿಯ ಮಮತೆಯನ್ನು ಬಯಸಿ ಬರುವ ನಾಯಿ ಮರಿಗಳಿಗೆ ತಾಯಿಯ ಪ್ರೀತಿ ತೋರಿಸುತ್ತಾ, ನಾಯಿ ಮರಿಗಳು ಹತ್ತಿರ ಬಂದ ತಕ್ಷಣ ಮಲಗಿ ಹಾಲನ್ನು ನೀಡುತ್ತದೆ. ಸದ್ಯ ಈ ಬೆಕ್ಕು ಮತ್ತು ನಾಯಿಮರಿಗಳ ಸಂಬಂಧವನ್ನು ನೋಡಿ ಮನೆಯವರಿಗೂ ಅಚ್ಚರಿಯಾಗಿದೆ.

Also Read  ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನ ► ನವರಾತ್ರಿ ಉತ್ಸವ, ಹೊಸಅಕ್ಕಿ ನೈವೇದ್ಯ

error: Content is protected !!
Scroll to Top