ಏಣಿತಡ್ಕ: ಶಾಸಕರಿಂದ ರಸ್ತೆ ಕಾಮಗಾರಿ ವೀಕ್ಷಣೆ ► ಕಿಂಡಿ ಅಣೆಕಟ್ಟು ನಿರ್ಮಾಣ ಶೀಘ್ರದಲ್ಲಿ ಪ್ರಾರಂಭ-ಎಸ್.ಅಂಗಾರ

(ನ್ಯೂಸ್ ಕಡಬ) newskadaba.com ಪುತ್ತೂರು, ನ.11. ಇಲ್ಲಿನ ಕೊಯಿಲ ಗ್ರಾಮದ ಏಣಿತಡ್ಕದಲ್ಲಿ ಶಾಸಕರ ಅನುದಾನದಿಂದ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶನಿವಾರ ಸುಳ್ಯ ಶಾಸಕ ಎಸ್.ಅಂಗಾರ ವೀಕ್ಷಣೆ ಮಾಡಿ ಕಾಮಗಾರಿಯ ಗುಣಮಟ್ಟವನ್ನು ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರು.

ಏಣಿತಡ್ಕದ ನೂತನ ಸೇತುವೆ ಬಳಿಯಿಂದ ಸಬಳೂರು ಅಯೋಧ್ಯಾನಗರದ ಶ್ರೀರಾಮ ಭಜನಾ ಮಂದಿರದ ತನಕ ಸುಮಾರು 97 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಯಾಗುತ್ತಿದ್ದು, ಡಾಮಾರೀಕರಣ ನಡೆಯುತ್ತಿದೆ. ಇತ್ತೀಚೆಗೆ ಇದರ ಗುದ್ದಲಿ ಪೂಜೆ ನೇರವೇರಿ ತ್ವರಿತಗತಿಯಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಯಲ್ಲಿ ಶಾಸಕರು ಕಾಮಗಾರಿ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಏಣಿತಡ್ಕ ಕಾಲೋನಿಗೆ ಅತ್ಯಧಿಕ ಅನುದಾನಗಳನ್ನು ನೀಡಿ ಅಭಿವೃದ್ಧಿ ಪಡಿಸಲಾಗಿದೆ. ಈಗಾಲೇ 94 ಲಕ್ಷ ರೂ ಅನುದಾನದಲ್ಲಿ ಇಲ್ಲನ ರಸ್ತೆ ಡಾಮಾರಿಕರಣ ನಡೆಸಲಾಗಿದೆ. ಐವತ್ತು ಲಕ್ಷ ರೂ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಮಾಡಲಾಗಿದೆ. ಸುಮಾರು ಇಪ್ಪತ್ತು ಲಕ್ಷ ರೂ ವೆಚ್ಚದಲ್ಲಿ ರಸ್ತೆ ಕಾಂಕ್ರೀಟೀಕರಣ ನಡೆಸಲಾಗಿದೆ. ಇದೀಗ 97 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಪಡಿಲಾಗುತ್ತಿದೆ. ಏಣಿತಡ್ಕ ಹಾಲಿನ ಸೊಸೈಟಿ ಬಳಿಯಿರುವ ತೋಡಿಗೆ ಸುಮಾರು 34 ಲಕ್ಷ ರೂ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹೇಳಿದರು. ಮಾತ್ರವಲ್ಲದೆ ಈ ಹಿಂದೆ ತ್ರಿವೇಣಿ ಸರ್ಕಲ್ ಬಳಿಯಿಂದ ಆಯೋಧ್ಯಾನಗರ ಭಜನಾ ಮಂದಿರದ ತನಕ ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಡಾಮರೀಕರಣ ನಡೆಸಲಾಗಿದೆ. ಕುದುಲೂರು ಭಾಗಕ್ಕೆ ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ರಸ್ತೆ ದಾಮರೀಕರಣ ಹಾಗೂ ಕಾಂಕ್ರೀಟಿಕರಣ ನಡೆಸಲಾಗಿದೆ. ಹತ್ತು ಲಕ್ಷ ರೂ ವೆಚ್ಚದಲ್ಲಿ ಕುದುಲೂರು ರಸ್ತೆಯ ಉಳಿದ ಭಾಗದ ಡಾಮಾರೀಕರಣಕ್ಕೆ ಅನುದಾನ ಬಿಡುಗಡೆಯಾಗಿದೆ. ಗೋಳಿತ್ತಡಿಯಿಂದ ತ್ರಿವೇಣಿ ಸರ್ಕಲ್ ತನಕ ರಸ್ತೆ ಗುಂಡಿ ಮುಚ್ಚುವುದಕ್ಕಾಗಿ ಹತ್ತು ಲಕ್ಷ ರೂ ಅನುದಾನ ನೀಡಲಾಗುವುದು ಎಂದು ಶಾಸಕರು ವಿವರ ನೀಡಿದರು.

Also Read  ಕಡಬ ಪರಿಸರದಲ್ಲಿ ಕಳ್ಳರ ಓಡಾಟ..‼️ ➤ ಈ ಬಗ್ಗೆ ಕಡಬ ಎಸ್ಐ ಹೇಳಿದ್ದೇನು ಗೊತ್ತೇ..⁉️


ಶಾಸಕರೊಂದಿಗೆ ನೆಲ್ಯಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಧರ್ಮಪಾಲ ರಾವ್ ಕಜೆ, ಸುಳ್ಯ ಮಂಡಲ ಬಿಜೆಪಿ ಸೋಶಿಯಲ್ ಮೀಡಿಯಾ ಸಂಚಾಲಕ ಸದಾಶಿವ ಶೆಟ್ಟಿ ಮಾರಂಗ, ಕೊಯಿಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಬೇಂಗದಪಡ್ಪು, ಮಾಜಿ ಸದಸ್ಯ ಸಂಜೀವ ಗೌಡ ಪರಂಗಾಜೆ, ಎ.ಪಿ.ಎಂಸಿ ಮಾಜಿ ನಿರ್ದೆಶಕ ಶೀನಪ್ಪ ಗೌಡ ವಳಕಡಮ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top