ಗೌರಿ ಲಂಕೇಶ್ ಹತ್ಯೆ ಪ್ರಕರಣ ►ಎಸ್ಐಟಿ ಬಲೆಗೆ ಸಿಕ್ಕಿಬಿದ್ದ ಮೂವರು ಹಂತಕರು, ಅಜ್ಞಾತ ಸ್ಥಳದಲ್ಲಿ ವಿಚಾರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.11. ಪತ್ರಕರ್ತೆ ಗೌರಿ ಲಂಕೆಶ್​​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್’ಐಟಿ ಬಲೆಗೆ ಶಂಕಿತ ಮೂವರು ಹಂತಕರು ಸಿಕ್ಕಿದ್ದಾರೆ ಎನ್ನಲಾಗಿದ್ದು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಯುತ್ತಿದೆ.

ರೇಖಾಚಿತ್ರದ ಆಧಾರದ ಮೇಲೆ ಶಂಕಿತ ಹಂತಕರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ಗೋಪ್ಯ ಸ್ಥಳದಲ್ಲಿ ಕಳೆದ ಒಂದು ವಾರದಿಂದ ನಿರಂತರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ರೇಖಾಚಿತ್ರ ಹೋಲಿಕೆಯ ಮೇಲೆ ಶಂಕಿತರ ಮೂವರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಕಳೆದ ವಾರ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಕರೆತರಲಾಗಿದೆ ಎನ್ನಲಾಗಿದೆ. ಭಾವಚಿತ್ರ ಹೋಲಿಕೆಯಿದ್ದ ಈ ಮೂವರ ಬಗ್ಗೆ ಗದಗದ ಎಸ್’ಪಿಗೆ ಸಾರ್ವಜನಿಕರು ದೂರು ನೀಡಿದ್ದರು.

Also Read  ಫೆ. 27, 28 ರಂದು ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ರಜೆ..!

ಈ ಮಾಹಿತಿಯನ್ನು ಆಧರಿಸಿ ಎಸ್ಐಟಿ ತಂಡ ಬೆಂಗಳೂರಿಗೆ ಕರೆತಂದಿದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 5 ರಂದು ಸಂಜೆ ಅಪರಿಚಿತರು ಗುಂಡಿಕ್ಕಿ ಕೊಂದಿದ್ದರು. ಈ ಹತ್ಯೆಯ ನಂತರ ದೇಶಾದ್ಯಂತ ವಿವಿಧ ವಲಯದಿಂದ ಪ್ರತಿಭಟನೆ ನಡೆದಿತ್ತು. ಹತ್ಯೆಯನ್ನು ಭೇದಿಸಲು ರಾಜ್ಯ ಸರ್ಕಾರ 100 ಮಂದಿ ಸಿಬ್ಬಂದಿಯುಳ್ಳ ಎಸ್ಐಟಿ ತಂಡವನ್ನು ರಚಿಸಿತ್ತು.

 

error: Content is protected !!
Scroll to Top