(ನ್ಯೂಸ್ ಕಡಬ) newskadaba.com ಮಂಗಳೂರು, ನ 8, ಕರ್ತವ್ಯದಲ್ಲಿದ್ದ ಪೊಲೀಸರಿಗೆ ವಿಚಾರಣಾದೀನ ಖೈದಿಯೊಬ್ಬ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಘಟನೆ ಪಿವಿಎಸ್ ವೃತ್ತದ ಬಳಿ ಬುಧವಾರ ಮದ್ಯಾಹ್ನ ನಡೆದಿದೆ.
ಕಳ್ಳತನ ಮತ್ತು ಗಾಂಜಾ ಪ್ರಕರಣದ ಆರೋಪಿಯಾಗಿರುವ ಪುಂಜಾಲಕಟ್ಟೆಯ ಖೈದಿಯನ್ನು ವಿಚಾರಣೆಗಾಗಿ ನ್ಯಾಯಲಯಕ್ಕೆ ಕರೆತಂದು, ಜೈಲಿಗೆ ಹಿಂತಿರುಗುತ್ತಿರುವಾಗ ಕೈಗೆ ಹಾಕಿದ ಸರಪಳಿಯಿಂದ ಪೊಲೀಸರ ಮೇಲೆ ದಾಳಿ ಮಾಡಿ, ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ.
ಆದರೆ ತಕ್ಷಣ ಎಚ್ಚೆತ್ತ ಪೊಲೀಸರು ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ ಟ್ರಾಫಿಕ್ ಪೊಲೀಸ್ ಹಾಗೂ ಸಾರ್ವಜನಿಕರ ಸಹಾಯದಿಂದ ಆತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಹೋಮಗಾರ್ಡ್ ಮೋಹನ್ ಹಾಗೂ ಹೆಡ್ ಕಾನ್ ಸ್ಟೇಬಲ್ ಕುರಿಯಕೋಸ್ ಎನ್ನುವವರಿಗೆ ಸರಪಳಿಂದ ದಾಳಿ ನಡೆಸಿದ ಕಾರಣ ತಲೆಗೆ ಗಾಯಗಳಾಗಿವೆ.