ಕಡಬ: ರಾಮಕುಂಜ ಸಂಸ್ಕೃತ ಹಿ.ಪ್ರಾ.ಶಾಲಾ ಶತಮಾನೋತ್ಸವ ► ಪೂರ್ವಭಾವಿ ಸಭೆ, ಸಮಿತಿ ರಚನೆ

(ನ್ಯೂಸ್ ಕಡಬ) newskadaba.com ಕಡಬ, ನ.8. ಗ್ರಾಮೀಣ ಪ್ರದೇಶದಲ್ಲಿ 1919ರಲ್ಲಿ ಆರಂಭಗೊಂಡ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವದ ಸಂಭ್ರಮದಲ್ಲಿದೆ. ವಿದ್ಯಾಲಯದ ಶತಮಾನದ ಹಾದಿಯಲ್ಲಿ ಸೇವೆಗೈದವರನ್ನು ಸ್ಮರಿಸುವ ಉತ್ಸವವನ್ನು 2018ರ ಕೊನೆಗೆ ನಡೆಸಲು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀ ಪಾದರ ಮಾರ್ಗದರ್ಶನದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಶಾಲಾ ಆಡಳಿತ ಮಂಡಳಿ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸದಸ್ಯರ ಉಪಸ್ಥಿತಿಯಲ್ಲಿ ಹಾಗೂ ಊರವರ ಸಹಭಾಗಿತ್ವದಲ್ಲಿ ಶತಮಾನೋತ್ಸವದ ಆಚರಣೆಗೆ ವಿವಿಧ ಸಮಿತಿಗಳಿಗೆ ಮುಖ್ಯಸ್ಥರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಶತಮಾನೋತ್ಸವ ಸಮಿತಿಗೆ ಕೃಷ್ಣಮೂರ್ತಿ ಕಲ್ಲೇರಿ, ನೆನಪಿನ ಸಂಚಿಕೆ ಸಮಿತಿಗೆ ಶಿವಪ್ರಸಾದ ಇಜ್ಜಾವು, ಹಳೆ ವಿದ್ಯಾರ್ಥಿ ಸಮಿತಿಗೆ ಪ್ರಶಾಂತ ಆರ್. ಕೆ., ಸಂಪರ್ಕ ಸಮಿತಿಗೆ ಸುಬ್ರಹ್ಮಣ್ಯ ಆರ್. ಎಂ., ಪ್ರಚಾರ ಸಮಿತಿಗೆ ಕರಣಾಕರ ಉರ್ಕ ಇವರನ್ನು ಆಯ್ಕೆ ಮಾಡಲಾಯಿತು. ಉಳಿದ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ನೇಮಿಸಿ ಮುಂದಿನ ಸಭೆ ನಡೆಸುವುದೆಂದು ತೀರ್ಮಾನಿಸಲಾಯಿತು.

Also Read  ರೈಲುಗಳ ಮುಖಾಮುಖಿ ಢಿಕ್ಕಿ; 26 ಮಂದಿ ದುರ್ಮರಣ

ಆಡಳಿತ ಮಂಡಳಿ ಪದಾಧಿಕಾರಿಗಳಾದ ರಾಧಾಕೃಷ್ಣ ಕೆ.ಎಸ್., ಸೇಸಪ್ಪ ರೈ, ಲಿಂಗಪ್ಪ ಗೌಡ, ಲಕ್ಷ್ಮೀ ನಾರಾಯಣ ರಾವ್  ಉಪಸ್ಥಿತರಿದ್ದರು. ಪ್ರಮುಖರಾದ ಎಂ. ಸತೀಶ ಭಟ್, ಎಸ್.ಎನ್.ರಾಘವೇಂದ್ರ, ದಿವಾಕರ ರಾವ್, ಗಣೇಶ್, ಜನಾರ್ದನ, ಆಶ್ವಿನಿಕುಮಾರ್ ಮೊದಲಾದವರು ಭಾಗವಹಿಸಿದರು. ಶಾಲಾ ಮುಖ್ಯ ಶಿಕ್ಷಕ ನಾರಾಯಣ ಭಟ್.ಟಿ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಶಿಕ್ಷಕ ಶಿಕ್ಷಕಿಯರು ಸಹಕರಿಸಿದರು.

error: Content is protected !!
Scroll to Top