ಕುಂತೂರು: ‘ನಕ್ಷತ್ರ’ ಸ್ವಸಹಾಯ ಸಂಘ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ನ.8. ಶ್ರೀ ಕ್ಷೇ.ಧ.ಗ್ರಾ.ಯೋಜನೆ ಮಾರ್ಗದರ್ಶನದಲ್ಲಿ ನಡೆಯುವ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪೆರಾಬೆ ಇದರ ಆಶ್ರಯದಲ್ಲಿ ರಚನೆಗೊಂಡಿರುವ ‘ನಕ್ಷತ್ರ’ಸ್ವಸಹಾಯ ಸಂಘ ಕುಂತೂರು ಕಚೇರಿಯಲ್ಲಿ ಉದ್ಘಾಟನೆಗೊಂಡಿತು.

ಶ್ರೀ ಶಾರದಾಂಬಾ ನವಜೀವನ ಸಮಿತಿ ಅಧ್ಯಕ್ಷರಾದ ಸುಬ್ರಾಯ ಗೌಡ ಉದ್ಘಾಟಿಸಿದರು. ಪೆರಾಬೆ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುಜಾತರವರು ತಂಡದ ನಿಯಾಮಾವಳಿ, ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

ಕಡಬ ವಲಯ ಮೇಲ್ವಿಚಾರಕ ಬಾಬು, ಸುವಿಧಾ ಸಹಾಯಕ ಚೆನ್ನಕೇಶವ ರೈ ಗುತ್ತುಪಾಲು, ಸೇವಾ ಪ್ರತಿನಿಧಿ ಸವಿತಾ ಉಪಸ್ಥಿತರಿದ್ದರು. ತಂಡದ ಪ್ರಬಂಧಕ ಧರ್ಣಪ್ಪ ಗೌಡ, ಸಂಯೋಜಕ ವಿಶ್ವಾಸ್, ಕೋಶಾಧಿಕಾರಿ ಯತೀಶ, ಸದಸ್ಯರುಗಳಾದ ಯೋಗೀಶ, ಪರಮೇಶ್ವರವರು ಸಹಕರಿಸಿದರು.

error: Content is protected !!
Scroll to Top