ತಲಪಾಡಿ: ಮೂವರ ಸಾವಿಗೆ ವಿಷಾನಿಲ ಸೇವನೆ ಕಾರಣ ► ಜನರೇಟರ್ ಹೊಗೆಯಿಂದ ಉಂಟಾದ ಕಾರ್ಬನ್ ಮಾನಾಕ್ಸೈಡ್ ಗೆ ಮೂವರು ಬಲಿ

(ನ್ಯೂಸ್ ಕಡಬ) newskadaba.com ತಲಪಾಡಿ, ನ.07, ಇಲ್ಲಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಯಲ್ಲಿ ಮೂವರ ಅನುಮಾನಾಸ್ಪದ ಸಾವಿಗೆ ಕಾರ್ಬನ್‌ ಮಾನಾಕ್ಸೈಡ್ ಕಾರಣ ಎಂದು ತಿಳಿದುಬಂದಿದೆ.

ಕೋಟೆಕಾರು ಶಾಖೆಯ ಭದ್ರತಾ ಸಿಬ್ಬಂದಿಗಳಾದ ಉಮೇಶ್, ಸಂತೋಷ್ ಮತ್ತು ಸೋಮನಾಥ್ ಎಂಬವರು ಸೋಮವಾರದಂದು ಗುಡುಗು ಮಳೆ ಇದ್ದ ಹಿನ್ನೆಲೆಯಲ್ಲಿ ಜನರೇಟರ್ ಚಾಲನೆ ಮಾಡಿ ಫ್ಯಾನ್ ಹಾಕಿ‌ ಶಾಖೆಯ ಒಳಗಡೆ ಮಲಗಿದ್ದು, ಜನರೇಟರ್ ನ ಹೊಗೆಯಿಂದ ಉತ್ಪತ್ತಿಯಾಗುವ ಕಾರ್ಬನ್ ಮಾನಾಕ್ಸೈಡ್ ವಿಷಾನಿಲ ಸೇವಿಸಿ ಮೃತಪಟ್ಟಿದ್ದಾರೆನ್ನಲಾಗಿದೆ‌. ಈ ಬಗ್ಗೆ ಶಾಖೆಯ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಇದು ವಿಷಾನಿಲ ಸೇವನೆಯಿಂದ ಉಂಟಾದ ಅವಘಡ ಎಂದು ಕಂಡುಬಂದಿದೆ.

Also Read  ವೈರಲ್ ಆಯ್ತು ಚಿಕ್ಕಣ್ಣ, 'ಟಗರು' ಸರೋಜಾ ಮದುವೆ ಫೋಟೋ ➤ ಬಯಲಾಯ್ತು ಅಸಲಿಯತ್ತು

ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಟಿ.ಆರ್.ಸುರೇಶ್, ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

error: Content is protected !!
Scroll to Top