(ನ್ಯೂಸ್ ಕಡಬ) newskadaba.com ಕಾರ್ಕಳ, ನ.7. ಆವರಣ ಇಲ್ಲದ ಬಾವಿಯೊಂದಕ್ಕೆ ಕಾಡು ಕೋಣವೊಂದು ಬಿದ್ದ ಘಟನೆ ಈದು ಗ್ರಾಮದಲ್ಲಿ ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ.
ಈದು ಪರಿಸರದ ಮಲಂಜ ಆನಂದ ಪೂಜಾರಿ ಎಂಬವರಿಗೆ ಸೇರಿದ ಜಾಗದಲ್ಲಿ ಸುಮಾರು 20 ಅಡಿ ಆಳದ ಬಾವಿಯೊಳಗಿನಿಂದ ಪ್ರಾಣಿಯೊಂದರ ಕೂಗು ಕೇಳಿ ಬಂದ ಹಿನ್ನಲೆಯಲ್ಲಿ ಹೋಗಿ ನೋಡಿದಾಗ ಕಾಡುಕೋಣ ಬಾವಿಯಲ್ಲಿರುವುದು ಬೆಳಕಿಗೆ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿ ಜೆಸಿಬಿ ಮೂಲಕ ಬಾವಿಗೆ ಕಣಿ ತೋಡಿ ಕಾಡು ಕೋಣವನ್ನು ರಕ್ಷಿಸಿದರು.
ತಡರಾತ್ರಿ ಆಹಾರ ಹುಡುಕುತ್ತಾ ಬಂದಿದ್ದ ಕಾಡುಕೋಣ ಆವರಣವಿಲ್ಲದ ಬಾವಿಗೆ ಬಿದ್ದಿದ್ದು, ಸಂಜೆಯ ವೇಳೆಗೆ ಕಾಡುಕೋಣ ಮರಳಿ ಕಾಡಿಗೆ ಸೇರಿತು.