ಆರೆಸ್ಸೆಸ್ ರಾಮಕುಂಜ ಮಂಡಲ ವತಿಯಿಂದ ಪಥ ಸಂಚಲನ

(ನ್ಯೂಸ್ ಕಡಬ) newskadaba.com ಕಡಬ, ನ.7. ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಮಕುಂಜ ಮಂಡಲ ವತಿಯಿಂದ ಪಥ ಸಂಚಲನ ಕಾರ್ಯಕ್ರಮ ಭಾನುವಾರ ಸಾಯಂಕಾಲ ನಡೆಯಿತು.

ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೋಕುಲನಗರದಿಂದ ಆರಂಭಗೊಂಡ ಪಥಸಂಚಲನ ಗೋಳಿತ್ತಡಿ ಮೂಲಕ ಸಾಗಿ ಶಾರದನಗರದಲ್ಲಿ ಸಮಾಪನಗೊಂಡಿತ್ತು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯವಾಹ ಶ್ರೀನಿವಾಸ್ ಉಬರಡ್ಕ ಬೌದ್ದಿಕ್ ನೀಡಿದರು. ಪುಷ್ಪರಾಜ್ ಹಳೆನೇರಿಂಕಿ ಸಂಘದ ಪ್ರಾಥನೆ ಹಾಡಿದರು. ಮುಖ್ಯಶಿಕ್ಷಕ ಚರಣ್ ಉಪಸ್ಥಿತರಿದ್ದರು.

error: Content is protected !!
Scroll to Top