ಕಡಬ ಜನಸಂಪರ್ಕ ಸಭೆ ► 94ಸಿ ಜಾಗದ ಹಕ್ಕುಪತ್ರದಲ್ಲಿ ತಾರತಮ್ಯ ಆರೋಪ

(ನ್ಯೂಸ್ ಕಡಬ) newskadaba.com ಕಡಬ, ನ.7. ಇಲ್ಲಿನ ತಾಲೂಕು ಮಟ್ಟದ ಮಾಸಿಕ ಜನಸಂಪರ್ಕ ಸಭೆಯು ಜಿ.ಪಂ.ಸದಸ್ಯರಾದ ಪಿ.ಪಿ ವರ್ಗೀಸ್ ರವರ ಅಧ್ಯಕ್ಷತೆಯಲ್ಲಿ ಕಡಬ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಕುಟ್ರುಪ್ಪಾಡಿ ಮತ್ತು ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪೇರಡ್ಕ- ಕಡಬ ಜಿಲ್ಲಾ ಪಂಚಾಯಿತಿ ರಸ್ತೆಯ ಪೇರಡ್ಕದಿಂದ ಕಾರ್ಕಳ ವರೆಗಿನ ಸುಮಾರು  2 ಕಿ.ಮೀ ರಸ್ತೆಯು ಸಂಚಾರಕ್ಕೆ ಯೋಗ್ಯವಾಗಿಲ್ಲ. ಸುಮಾರು  25 ವರ್ಷಗಳಿಂದ ಡಾಮರೀಕರಣ ಆಗದೆ ಸಾರ್ವಜನಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಹಲವಾರು ವರ್ಷಗಳಿಂದ ರಸ್ತೆಗೆ ಹೊಸತಾಗಿ ಡಾಮರೀಕರಣಗೊಳಿಸುವಂತೆ ಬೇಡಿಕೆ ಇಟ್ಟಿದ್ದರೂ ಪ್ರಯೋಜನವಾಗಿರುವುದಿಲ್ಲ. ತಕ್ಷಣ ಕ್ರಮ ಕೈಗೊಂಡು ಸಾರ್ವಜನಿಕ ಜಿ.ಪಂ.ರಸ್ತೆಯನ್ನು ದುರಸ್ಥಿಗೊಳಿಸಬೇಕೆಂದು ಈ ಭಾಗದ ಜನತೆ ಕಡಬ ಜನಸಂಪರ್ಕ ಸಭೆಯಲ್ಲಿ ಆಗ್ರಹಿಸಲಾಯಿತು.

ಕಳೆದ 4 ವರ್ಷದಿಂದ ಈ ರಸ್ತೆಯನ್ನು ದುರಸ್ಥಿಗೊಳಿಸುವಂತೆ ಜನಪ್ರತಿನಿಧಿಗಳಲ್ಲಿ ಅಧಿಕಾರಿಗಳಲ್ಲಿ ವಿನಂತಿಸಿಕೊಳ್ಳುತ್ತಾ ಬರುತ್ತಿದ್ದರೂ ರಸ್ತೆ ದುರಸ್ಥಿಯಾಗದೆ ಸಂಪೂರ್ಣ ಕೆಟ್ಟು ಹೋಗಿರುತ್ತದೆ. ಇನ್ನೂ ಬೀದಿಗಿಳಿದು ಹೋರಾಟ ಮಾಡಲಾಗುವುದು ಈ ನಿಟ್ಟಿನಲ್ಲಿ  ನೂಜಿಬಾಳ್ತಿಲ ರೆಂಜಿಲಾಡಿ, ಕುಟ್ರುಪ್ಪಾಡಿ ಗ್ರಾಮಗಳ ಪೇರಡ್ಕ ಪರಿಸರದವರನ್ನು ಒಟ್ಟಾಗಿಸಿಕೊಂಡು ರಸ್ತೆ ಅಭಿವೃದ್ದಿ ಹೋರಾಟ ಸಮಿತಿ ರಚಿಸಲಾಗಿದ್ದು ಈ ಸಮಿತಿ ಮೂಲಕ ಸಮಿತಿಯ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಈ ಭಾಗದ ಜನತೆ ತಿಳಿಸಿದರು.  94ಸಿ ಲೋಕಾಯುಕ್ತಕ್ಕೆ ಕಳುಹಿಸಬೇಕು 94ಸಿ ಯಲ್ಲಿ ಕೆಲವರಿಗೆ ಜಾಗದ ಹಕ್ಕುಪತ್ರ ಸಿಕ್ಕಿದರೆ ಇನ್ನು ಕೆಲವರಿಗೆ ಸಿಗುತ್ತಿಲ್ಲ, ಕೆಲವೊಂದು ನೆಪವೊಡ್ಡಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ.  ಸರಕಾರದ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಇಲ್ಲಿ ಕೂಡ ತಾರತಮ್ಯ ಆಗುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲು ನಿರ್ಣಯಿಸಬೇಕು ಎಂದು ಕುಟ್ರುಪ್ಪಾಡಿ ಮಾಜಿ ಸದಸ್ಯ ಕ್ಷೇವಿಯರ್ ಬೇಬಿ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಕೆ.ಪಿ ಮೋಹನ್ರವರು ಐತ್ತೂರು ನಲ್ಲೂ ಇಂತಹ ಸಮಸ್ಯೆಗಳಿವೆ. ಸರಕಾರದ ಭೂಮಿ ಎಲ್ಲರಿಗೂ ಸಿಗುವಂತೆ ಕ್ರಮಕೈಗೊಳ್ಳಬೇಕು ಎಂದರು. ವಿಚಾರದ ಬಗ್ಗೆ ಉತ್ತರಿಸಿದ ಪಿ.ಪಿ ವರ್ಗೀಸ್ ರವರು ಹೆಚ್ಚು ಕಡಿಮೆ ಆಗಿದ್ದು ಯಾರಿಗಾದರೂ ಅರ್ಹರಿಗೆ ತೊಂದರೆಯಾಗಿದ್ದರೆ ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ವಂಚಿತರಿಗೂ ಪ್ರಯೋಜನ ಸಿಗುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಅದು ಬಿಟ್ಟು ಲೋಕಾಯಕ್ತರಿಗೆ ದೂರು ನೀಡಿದರೆ ಎಲ್ಲರೂ ತೊಂದರೆ ಅನುಭವಿಸಬೇಕಾದೀತು ಎಂದರು.

ಐತ್ತೂರು ಗ್ರಾ.ಪಂ.ನ ಕೇನ್ಯದಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕು ಐತ್ತೂರು ಗ್ರಾಮದಲ್ಲಿ ಕೆಲವರಿಗೆ ಹಕ್ಕುಪತ್ರ ನೀಡಿದ್ದು ಕೆಲವರಿಗೆ ನೀಡದೆ ಇರುವುದು ಐತ್ತೂರು ಗ್ರಾ.ಪಂ.ನ ಇಬ್ಬಗೆ ನೀತಿಯಾಗಿದೆ. ಅಲ್ಲಿ ಸರಕಾರಿ ಸ್ಥಳದಲ್ಲಿ ಎಲ್ಲರಿಗೂ ಹಕ್ಕುಪತ್ರ ನೀಡಬೇಕೆಂದು ಕೆ.ಪಿ ತೋಮಸ್ ಆಗ್ರಹಿಸಿದಲ್ಲದೆ ಕೆಲವರು ಸರಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂದು ದೂರಿದರು. ವಿಚಾರದ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಕ್ರಮಕೈಗೊಳ್ಳಬೇಕೆಂದು ಜಿ.ಪಂ.ಸದಸ್ಯರು ಸೂಚಿಸದರು. 9/11 ಎಲ್ಲರಿಗೂ ಸಮಾನ ರೀತಿಯಲ್ಲಿ ಸಿಗುವಂತಾಗಲಿ 9/11 ನಿಂದ ಜನಸಾಮಾನ್ಯರಿಗೆ ಕಟ್ಟಡ ಕಟ್ಟಲು ತೊಂದರೆಯಾಗುತ್ತಿದ್ದು ಕೆಲವು ಗ್ರಾಮ ಪಂಚಾಯತಿ ಅಧಿಕಾರಿಗಳು ಜನಸಾಮಾನ್ಯರನ್ನು ಸತಾಯಿಸುತ್ತಿದ್ದಾರೆ. ನಿಯಮಾನುಸಾರ ಎಲ್ಲಾ ದಾಖಲೆಗಳು ಸರಿ ಇದ್ದಲ್ಲಿ ಕೂಡಲೆ 9/11 ನೀಡಿ ಮನೆ ಕಟ್ಟಲು ಅನುವು ಮಾಡಿಕೊಡಬೇಕೆಂದು ಕ್ಷೇವಿಯರ್ ಬೇಬಿ ಆಗ್ರಹಿಸಿದರು. ಸಾರ್ವಜನಿಕರ ಸಮಸ್ಯೆಗಳಿಗೆ ಕಡಬ ತಹಶೀಲ್ದಾರ್ ಜಾನ್ಪ್ರಕಾಶ್ ಉತ್ತರಿಸಿ ಸಭೆಯಲ್ಲಿ ಇತ್ಯರ್ಥ ಪಡಿಸಬಹುದಾದ ವಿಚಾರಗಳನ್ನು ಇತ್ಯರ್ಥ ಪಡಿಸಿದ್ದು ಇತರ ಇಲಾಖಾ ವಿಚಾರಗಳ ಬಗ್ಗೆ ಸಂಬಂಧಪಟ್ಟವರಿಗೆ ವರದಿ ಕಳುಹಿಸಲಾಗುವುದೆಂದು ತಿಳಿಸಿದರು.

ಕಡಬ ವಲಯ ಮೊಗೇರ ಯುವ ವೇದಿಕೆ ಅಧ್ಯಕ್ಷ ವಸಂತ ಕುಬಲಾಡಿ ಮತಾನಾಡಿ,  ಡಿ ಸಿ ಮನ್ನಾ ಭೂಮಿ ವಿಚಾರದಲ್ಲಿ ಕಾರ್ಯಚರಿಸುತ್ತಿರುವ ಟಾಸ್ಕ್ ಪೋಸರ್ ಸಮಿತಿ ಈಗಾಗಲೇ ಪುತ್ತೂರು ತಾಲೂಕಿನಲ್ಲಿ ಅಸ್ಥಿತ್ವದಲ್ಲಿದೆ ಈ ಸಮಿತಿಯ ರಚನೆ  ಕಡಬ ತಾಲೂಕಿನಲ್ಲಿಯೂ ಆಗಬೇಕು ಎಂದು ಆಗ್ರಹಸಿದರು. ಈ ಬಗ್ಗೆ ಉತ್ತರಿಸಿದ ಪಿ ಪಿ ವರ್ಗೀಸ್ ಇದೊಂದು ಉತ್ತಮ ಸಲಹೆ ಈ ಬಗ್ಗೆ ನಿರ್ಣಯಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.

ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಸದಸ್ಯರಾದ ಪಿ.ವೈ ಕುಸುಮಾ, ಕೆ.ಟಿ ವಲ್ಸಮ್ಮ, ಫಝಲ್ ಕೋಡಿಂಬಾಳ, ಕುಟ್ರುಪ್ಪಾಡಿ ಗ್ರಾ.ಪಂ.ಅಧ್ಯಕ್ಷೆ ಜಾನಕಿ, ಕಡಬ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಚೆನ್ನಪ್ಪ ಗೌಡ, ನೂಜಿಬಾಳ್ತಿಲ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಆನಂದ ಎ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾ ಕಡಬ ಮೇಲ್ವಿಚಾರಕಿ ಹೇಮಾರಾಮ್ದಾಸ್, ಪೆರಾಬೆ ಪಿಡಿಒ ಲಲಿತಾ, ಕೊಂಬಾರು ಪಿಡಿಒ ರಾಘವೇಂದ್ರ, ಬಿಳಿನೆಲೆ ಪಿಡಿಒ ಪದ್ಮನಾಭ ಪಳ್ಳಿಗದ್ದೆ, ಕಡಬ ಹಿ.ಆರೋಗ್ಯ ನಿರೀಕ್ಷಕ ಲಕ್ಷ್ಮಣ, ಕೃಷಿ ಅಧಿಕಾರಿ ತಿಮ್ಮಪ್ಪ ಮೊದಲಾದವರು ಇದ್ದರು. ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ಸ್ವಾಗತಿಸಿ, ವಂದಿಸಿದರು.

error: Content is protected !!

Join the Group

Join WhatsApp Group