ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ನಡೆಯುತ್ತಿರುವಾಗಲೇ ► ಬಂಟ್ವಾಳದ ಸ್ಪರ್ಧಿ ಕುಸಿದು ಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ನ.6. ವ್ಯಕ್ತಿಯೋರ್ವ ದೇಹದಾರ್ಢ್ಯ ಸ್ಪರ್ಧೆಯಲ್ಲಿ‌ ಭಾಗವಹಿಸುತ್ತಿರುವಾಗಲೇ ಕುಸಿದು ಬಿದ್ದಿದ್ದು, ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

ಬಂಟ್ವಾಳ ತಾಲೂಕು ಫರಂಗಿಪೇಟೆಯ ವಿನಯರಾಜ್ (34) ಮೃತಪಟ್ಟವರು. ಭಾನುವಾರ ರಾತ್ರಿ ಅಮೆಚೂರು ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ಡಾನ್ ಬಾಸ್ಕೊ ಸಭಾಂಗಣದಲ್ಲಿ ಏರ್ಪಡಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ‌ ವಿನಯರಾಜ್ ಕೂಡಾ ಸ್ಪರ್ಧಿಸಿದ್ದರು.

ಪವರ್ ಲಿಫ್ಟರ್ ಆಗಿದ್ದ ವಿನಯರಾಜ್ ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ‌ ಭಾಗವಹಿಸಿದ್ದರು. ಪ್ರದರ್ಶನ ನೀಡುತ್ತಿದ್ದಂತೆ ಅಲ್ಲೇ ಕುಸಿದು ಬಿದ್ದ ವಿನಯರಾಜ್  ಪ್ರಥಮ ಚಿಕಿತ್ಸೆಯ ಬಳಿಕ ಸ್ವಲ್ಪ ಚೇತರಿಸಿಕೊಂಡರು. ಆದರೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಪಕ್ಕದಲ್ಲೇ ಇದ್ದ ಕೆಎಂಸಿ‌ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Also Read  ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ

ವಿನಯರಾಜ್ ವೃತ್ತಿಯಲ್ಲಿ‌ ಇಲೆಕ್ಟ್ರಿಶಿಯನ್ ಆಗಿದ್ದರು. ಘಟನೆ ಕುರಿತು ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top