ದ.ಕ.ಜಿಲ್ಲಾ ಯುವಜನ ಒಕ್ಕೂಟ ವತಿಯಿಂದ ► ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಅಭಿನಂದನೆ

(ನ್ಯೂಸ್ ಕಡಬ) newskadaba.com ಸವಣೂರು, ನ.6. ದ.ಕ.ಜಿಲ್ಲಾ ಯುವಜನ ಒಕ್ಕೂಟದ ಮನವಿಯನ್ನು ಪುರಸ್ಕರಿಸಿ ಯುವಜನ ಮೇಳ, ಯುವಜನೋತ್ಸವ, ಯುವಸಮ್ಮೇಳನ ಕಾರ್ಯಾಗಾರವನ್ನು ಪ್ರತ್ಯೇಕವಾಗಿ ಆಯೋಜಿಸಲು ಕ್ರಮಕೈಗೊಂಡು ಯುವಜನರ ಬೇಡಿಕೆಯನ್ನು ಈಡೇರಿಸಿದಕ್ಕಾಗಿ ದ.ಕ.ಜಿಲ್ಲಾ ಯುವಜನ ಒಕ್ಕೂಟದ ವತಿಯಿಂದ ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಮೀನುಗಾರಿಕಾ ಸಚಿವರಾದ ಪ್ರಮೋದ್ ಮಧ್ವರಾಜ್ ಅವರನ್ನು ಉಡುಪಿಯಲ್ಲಿ ಬೇಟಿಯಾಗಿ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭ ಪುತ್ತೂರು ತಾಲೂಕು ಕ್ರೀಡಾಂಗಣದ ಅಭಿವೃದ್ಧಿಗಾಗಿ ಮಂಜೂರುಗೊಳಿಸಿದ ಅನುದಾನವನ್ನು ಬಿಡುಗಡೆ ಮಾಡುವಂತೆಯೂ ಕೇಳಿಕೊಳ್ಳಲಾಯಿತು.


ಈ ಸಂಧರ್ಭ ದ.ಕ.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು , ಕಾರ್ಯದರ್ಶಿ ಗಿರೀಶ್ ಶೆಟ್ಟಿ ಮಂಗಳೂರು, ಪುತ್ತೂರು ತಾ.ಯುವಜನ ಸಬಲೀಕರಣ ಹಾಗೂ ಕ್ರೀಡಾಕಾರಿ ಎಂ.ಮಾಮಚ್ಚನ್, ಪುತ್ತೂರು ತಾಲೂಕು ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಕರುಂಬಾರು,ಸಂಘಟನಾ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ , ನರಿಮೊಗರು ಪ್ರಖ್ಯಾತಿ ಯುವತಿ ಮಂಡಲದ ಅಧ್ಯಕ್ಷೆ ಗುರುಪ್ರಿಯಾ ನಾಯಕ್, ಕುಮಾರಮಂಗಲ ಅರ್ಪಿತಾ ಯುವತಿ ಮಂಡಲದ ಸದಸ್ಯೆ ಜಿಸ್ಮಿತಾ ಕೆ.ಆರ್, ಸವಣೂರು ಯುವತಿ ಮಂಡಲದ ಶುಭಾ ರೈ, ಸರ್ವೆ ಷಣ್ಮುಖ ಯುವಕ ಮಂಡಲದ ಸದಸ್ಯರಾದ ಕೀರ್ತನ್, ಕಿಶೋರ್ ಎಸ್.ಡಿ ಮೊದಲಾದವರಿದ್ದರು.

Also Read  ಲಿಫ್ಟ್ ನಲ್ಲಿ ಸಿಲುಕಿ ಯುವಕ ಮೃತ್ಯು..!

error: Content is protected !!
Scroll to Top