(ನ್ಯೂಸ್ ಕಡಬ) newskadaba.com ಕಲ್ಲಡ್ಕ, ನ.4. ಮದ್ಯಾಹ್ನದ ಬಿಸಿಯೂಟ ಕಿತ್ತುಕೊಂಡ ಸರ್ಕಾರಕ್ಕೆ ಸವಾಲು ಹಾಕಿದ ಕಲ್ಲಡ್ಕ ಶಾಲೆಯ ಮಕ್ಕಳು ಇದೀಗ ತಾವೇ ಭತ್ತ ಬೆಳೆದು ತಮ್ಮ ಅನ್ನಕ್ಕೆ ಬೇಕಾದ ಅಕ್ಕಿಯನ್ನು ತಾವೇ ಬೆಳೆದು ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.
ಕಲ್ಲಡ್ಕ ಪ್ರಭಾಕರ್ ಭಟ್ಟರ ಶ್ರೀರಾಮ ವಿದ್ಯಾಕೇಂದ್ರದ ಶಾಲೆಯ ಮಕ್ಕಳಿಗೆ ಬರುತ್ತಿದ್ದ ಅನ್ನದಾನದ ಅನುದಾನವನ್ನು ಆಗಸ್ಟ್ ತಿಂಗಳಲ್ಲಿ ಸರ್ಕಾರ ಕಿತ್ತುಕೊಂಡಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಕಲ್ಲಡ್ಕ ಶಾಲೆಯ ಮಕ್ಕಳು ಶಾಲೆಗೆ ಸೇರಿದ ಸುಮಾರು ಏಳು ಎಕರೆ ಗದ್ದೆಯಲ್ಲಿ ತಾವೇ ಭತ್ತದ ಪೈರು ನಾಟಿ ಮಾಡಿದ್ದರು. ಈಗ ಭತ್ತ ಬೆಳೆದು ತಾವೇ ಕಟಾವು ಮಾಡಿ ಒಟ್ಟು ಮಾಡಿದ್ದಾರೆ. ಅದರಿಂದ ಸುಮಾರು 20 ಕ್ವಿಂಟಾಲ್‍ನಷ್ಟು ಭತ್ತ ಸಿಕ್ಕಿದೆ. ತಮ್ಮ ಅನ್ನಕ್ಕಾಗಿ ತಾವೇ ಅಕ್ಕಿಯನ್ನು ರೆಡಿ ಮಾಡಿಕೊಂಡು ಸರ್ಕಾರಕ್ಕೆ ಹಾಕಿದ್ದ ಸವಾಲಲ್ಲಿ ಗೆದ್ದಿದ್ದಾರೆ.
ಸರ್ಕಾರ ಮಾಡಿದ ಕೆಲಸವನ್ನು ಮಕ್ಕಳು ಸವಲಾಗಿ ಸ್ವೀಕರಿಸಿ ತಾವೇ ಭತ್ತವನ್ನು ಬೆಳೆದಿದ್ದಾರೆ. ಇದರಿಂದ ಮಕ್ಕಳಲ್ಲಿ ಸ್ವಾವಲಂಬನೆ ಬೆಳೆದಿದೆ ಎಂದು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ತಮ್ಮ ಖುಷಿಯನ್ನು ವ್ಯಕ್ತಪಡಿಸಿದರು.