ಮಂಗಳೂರು: ಏರ್‌ಪೋರ್ಟ್‌ನ ಶೌಚಾಲಯದಲ್ಲಿ ಅಕ್ರಮ ಚಿನ್ನ ಪತ್ತೆ..!!!



(ನ್ಯೂಸ್ ಕಡಬ) newskadaba.com ಮಂಗಳೂರು , ನ.4. ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಚಿನ್ನದ ಗಟ್ಟಿಯಿರುವ ಬ್ಯಾಗೊಂದು ಪತ್ತೆಯಾದ ಘಟನೆ ವರದಿಯಾಗಿದೆ.





ದುಬೈಯಿಂದ ಮಂಗಳೂರಿಗೆ ತಲುಪಿದ್ದ ಸ್ಪೈಸ್ ಜೆಟ್ ಎಸ್.ಜಿ.60ರಲ್ಲಿ ಬಂದಿದ್ದ ಪ್ರಯಾಣಿಕನೊಬ್ಬ ಈ ಬ್ಯಾಗನ್ನು ಬಿಟ್ಟು ಹೋಗಿದ್ದು, ಸ್ವಚ್ಛತಾ ಸಿಬ್ಬಂದಿ ಶೌಚಾಲಯ ಸ್ವಚ್ಛಗೊಳಿಸುವ ಸಂದರ್ಭ ಈ ಬ್ಯಾಗನ್ನು ಕಂಡಿದ್ದು, ಸಂಬಂಧಪಟ್ಟವರಿಗೆ ತಿಳಿಸಿದ್ದಾರೆ.






ಕಂದಾಯ ಗುಪ್ತಚರ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕ ಆಗಮಿಸಿ, ಪರಿಶೀಲನೆ ನಡೆಸಿದಾಗ 1.166 ಗ್ರಾಂ.ವಿದೇಶಿ ಮೂಲದ ಚಿನ್ನದ ಬಿಸ್ಕತ್ತುಗಳಿರುವುದು ಬೆಳಕಿಗೆ ಬಂದಿದೆ. ಇಪ್ಪತ್ತನಾಲ್ಕು ಕ್ಯಾರೆಟ್ ಪರಿಶುದ್ಧತೆಯ ಚಿನ್ನದ ಮಾರುಕಟ್ಟೆ ದರ ಸುಮಾರು 34,17,845ರೂ ಎಂದು ಅಂದಾಜಿಸಲಾಗಿದೆ.

ಮುಂದಿನ ತನಿಖೆಗಾಗಿ ಚಿನ್ನಗಳನ್ನು ವಶಕ್ಕೆ ಪಡೆಯಲಾಗಿದೆ ಹಾಗೂ ಚಿನ್ನದ ಬ್ಯಾಗ್ ಬಿಟ್ಟು ಹೋದ ವ್ಯಕ್ತಿಯ ಮಾಹಿತಿ ಬಗ್ಗೆ ಕಲೆ ಹಾಕುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

error: Content is protected !!
Scroll to Top